ಪೂರ್ಣ ಚೇತರಿಸಿಕೊಂಡಿದ್ದೇನೆ: ಮೊದಲ ವೀಡಿಯೊ ಸಂದರ್ಶನದಲ್ಲಿ ಅಲೆಕ್ಸೀ ನವಾಲ್ನಿ

Update: 2020-10-06 16:25 GMT
Photo: twitter.com/navalny

ಮಾಸ್ಕೋ (ರಶ್ಯ), ಅ. 6: ಇತ್ತೀಚೆಗೆ ವಿಷಪ್ರಾಶನಕ್ಕೆ ಒಳಗಾಗಿರುವ ರಶ್ಯ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ ರಶ್ಯದ ಪ್ರಮುಖ ಯೂಟ್ಯೂಬ್ ಬ್ಲಾಗ್ ರೊಬ್ಬರಿಗೆ ಎರಡು ಗಂಟೆಗಳಿಗೂ ಹೆಚ್ಚಿನ ಅವಧಿಯ ವೀಡಿಯೊ ಸಂದರ್ಶನ ನೀಡಿದ್ದಾರೆ. ಇದು ಅವರು ಬರ್ಲಿನ್‌ನ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ನೀಡಿದ ಮೊದಲ ವೀಡಿಯೊ ಸಂದರ್ಶನವಾಗಿದೆ.

ನನ್ನ ಆರೋಗ್ಯ ತುಂಬಾ ಚೇತರಿಕೆಯನ್ನು ಕಂಡಿದೆ ಹಾಗೂ ನನ್ನ ಚೇತರಿಕೆಯ ವೇಗವನ್ನು ನೋಡಿ ಸ್ವತಃ ವೈದ್ಯರಿಗೇ ಆಶ್ಚರ್ಯವಾಗಿದೆ ಎಂದು 44 ವರ್ಷದ ನವಾಲ್ನಿ ಹೇಳಿದರು. ಆದರೆ, ಈಗಲೂ ನನ್ನ ಕೈಗಳು ನಡುಗುತ್ತಿವೆ ಹಾಗೂ ನಾನು ಫಿಸಿಯೋಥೆರಪಿಗೆ ಒಳಗಾಗುತ್ತಿದ್ದೇನೆ ಎಂದರು.

ರಶ್ಯದ ಸೈಬೀರಿಯ ಭಾಗದಿಂದ ಮಾಸ್ಕೋಗೆ ವಿಮಾನದಲ್ಲಿ ಹೋಗುತ್ತಿದ್ದಾಗ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ತೀವ್ರ ಟೀಕಾಕಾರ ನವಾಲ್ನಿ ತೀವ್ರವಾಗಿ ಅಸ್ವಸ್ಥರಾಗಿದ್ದರು. ಬಳಿಕ ಅವರನ್ನು ಬರ್ಲಿನ್ ಆಸ್ಪತ್ರೆಗೆ ಒಯ್ಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News