ಪೂರ್ವ ಆಫ್ರಿಕದಲ್ಲಿ ಭಾರೀ ಮಳೆ; ಅಗಾಧ ಪ್ರವಾಹ
Update: 2020-10-06 22:19 IST
ಅಡಿಸ್ ಅಬಾಬ (ಇಥಿಯೋಪಿಯ), ಅ. 6: ಪೂರ್ವ ಆಫ್ರಿಕದಲ್ಲಿ ನೆರೆ ಹಾವಳಿಯಿಂದ ಹಾನಿಗೊಳಗಾದವರ ಸಂಖ್ಯೆ ನಾಲ್ಕು ವರ್ಷಗಳಲ್ಲಿ ಐದು ಪಟ್ಟಿಗಿಂತಲೂ ಹೆಚ್ಚಿದೆ ಎಂದು ವಿಶ್ವಸಂಸ್ಥೆಯ ಅಂಕಿಸಂಖ್ಯೆಗಳು ತಿಳಿಸಿವೆ.
ಈ ಬಾರಿ ಪ್ರವಾಹದಿಂದ ಸುಮಾರು 60 ಲಕ್ಷ ಮಂದಿ ಸಂತ್ರಸ್ಥರಾಗಿದ್ದಾರೆ. ಈ ಪೈಕಿ 15 ಲಕ್ಷ ಮಕ್ಕಳು ನಿರ್ವಸಿತರಾಗಿದ್ದಾರೆ.
ಪೂರ್ವ ಆಫ್ರಿಕದ ಕೆಲವು ಭಾಗಗಳಲ್ಲಿ ಶತಮಾನದ ಮಳೆ ಸುರಿಯುತ್ತಿದೆ.
ಕಳೆದ ಬಾರಿ, ಹಿಂದೂ ಮಹಾಸಾಗರದ ಪೂರ್ವ ಮತ್ತು ಪಶ್ಚಿಮ ಬದಿಗಳ ನಡುವಿನ ಉಷ್ಣತೆಯಲ್ಲಿನ ಅಗಾಧ ವ್ಯತ್ಯಾಸ ಭಾರೀ ಮಳೆಗೆ ಕಾರಣ ಎಂದು ಹೇಳಲಾಗಿತ್ತು.