×
Ad

ಟೋಕಿಯೊ: ಚೀನಾ ಪ್ರಾಬಲ್ಯದ ವಿರುದ್ಧ ‘ಕ್ವಾಡ್’ ದೇಶಗಳ ಸಭೆ ಆರಂಭ

Update: 2020-10-06 22:31 IST

ಟೋಕಿಯೊ (ಜಪಾನ್), ಅ. 6: ಅವೆುರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಮಂಗಳವಾರ ಜಪಾನ್ ರಾಜಧಾನಿ ಟೋಕಿಯೊದಲ್ಲಿ ಅಮೆರಿಕದ ಏಶ್ಯದ ಮಿತ್ರದೇಶಗಳಾದ ಜಪಾನ್, ಆಸ್ಟ್ರೇಲಿಯ ಮತ್ತು ಭಾರತಗಳ ನಾಯಕರನ್ನು ಭೇಟಿಯಾದರು. ‘ಚೀನಾದ ಅಪಾಯಕಾರಿ ಹಾಗೂ ವೃದ್ಧಿಸುತ್ತಿರುವ ಪ್ರಾದೇಶಿಕ ಪ್ರಭಾವದ ವಿರುದ್ಧ ಬೆಂಬಲ ವೃದ್ಧಿಸುವುದು’ ಈ ಭೇಟಿಯ ಉದ್ದೇಶವಾಗಿದೆ.

ಅವೆುರಿಕ, ಭಾರತ, ಆಸ್ಟ್ರೇಲಿಯ ಮತ್ತು ಜಪಾನ್- ಈ ನಾಲ್ಕು ದೇಶಗಳು ಸೇರಿ ‘ಕ್ವಾಡ್’ (ನಾಲ್ಕರ) ಕೂಟವನ್ನು ಈಗಾಗಲೇ ರಚಿಸಿವೆ.

ಅವರ ಈ ಪ್ರವಾಸದಲ್ಲಿ ಮಂಗೋಲಿಯ ಮತ್ತು ದಕ್ಷಿಣ ಕೊರಿಯ ದೇಶಗಳ ಭೇಟಿಯೂ ಆರಂಭದಲ್ಲಿ ಸೇರ್ಪಡೆಗೊಂಡಿತ್ತು. ಆದರೆ, ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೋನ ವೈರಸ್ ಸೋಂಕಿಗೆ ಒಳಗಾದ ಹಿನ್ನೆಲೆಯಲ್ಲಿ ಈ ದೇಶಗಳ ಭೇಟಿಯನ್ನು ರದ್ದುಪಡಿಸಲಾಗಿದೆ.

ಚೀನಾ ವಿರುದ್ಧ ಏಶ್ಯದ ಮಿತ್ರ ದೇಶಗಳಿಂದ ಬೆಂಬಲ ಗಳಿಸುವುದು ಅವೆುರಿಕದ ಉದ್ದೇಶವಾಗಿದೆ. ಆದರೆ, ಆರ್ಥಿಕ ಸಂಬಂಧಗಳ ಹಿನ್ನೆಲೆಯಲ್ಲಿ ಚೀನಾದೊಂದಿಗೆ ನೇರ ಸಂಘರ್ಷವನ್ನು ತಡೆಯಲು ಈ ದೇಶಗಳು ಬಯಸಿವೆ ಎಂದು ಪರಿಣತರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News