2021ರ ವೇಳೆಗೆ 15 ಕೋಟಿ ಜನರು ಕಡು ಬಡತನಕ್ಕೆ: ವಿಶ್ವಬ್ಯಾಂಕ್ ವರದಿ

Update: 2020-10-07 19:00 GMT

ವಾಶಿಂಗ್ಟನ್, ಅ. 7: ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ, 2021ರ ವೇಳೆಗೆ 15 ಕೋಟಿಯಷ್ಟು ಜನರು ಕಡುಬಡತನದಲ್ಲಿರುತ್ತಾರೆ ಎಂದು ವಿಶ್ವಬ್ಯಾಂಕ್ ಬುಧವಾರ ಎಚ್ಚರಿಸಿದೆ. ಕೋವಿಡ್ ಬಳಿಕ, ಬಂಡವಾಳ, ಕಾರ್ಮಿಕರು, ಕೌಶಲ ಮತ್ತು ಹೊಸತನಗಳನ್ನು ಹೊಸ ಉದ್ಯಮಗಳು ಮತ್ತು ವಲಯಗಳಿಗೆ ಹರಿಸುವ ಮೂಲಕ ದೇಶಗಳು ‘ವಿಭಿನ್ನ ಆರ್ಥಿಕತೆ’ಗೆ ಸಿದ್ಧವಾಗಿರಬೇಕು ಎಂಬುದಾಗಿಯೂ ಅದು ಹೇಳಿದೆ.

ಕೋವಿಡ್-19 ಸಾಂಕ್ರಾಮಿಕವು ಈ ವರ್ಷ ಹೆಚ್ಚುವರಿಯಾಗಿ 8.8 ಕೋಟಿಯಿಂದ 11.5 ಕೋಟಿ ಜನರನ್ನು ಕಡುಬಡತನಕ್ಕೆ ನೂಕಿದೆ ಎಂದು ಭಾವಿಸಲಾಗಿದೆ. ಇದರೊಂದಿಗೆ 2021ರ ವೇಳೆಗೆ ಕಡುಬಡವರ ಒಟ್ಟು ಸಂಖ್ಯೆ 15 ಕೋಟಿಗೆ ಏರಲಿದೆ ಹಾಗೂ ಇದು ಆರ್ಥಿಕ ಕುಸಿತದ ತೀವ್ರತೆಯನ್ನು ಅವಲಂಬಿಸಿದೆ ಎಂದು ವಾಶಿಂಗ್ಟನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಶ್ವಬ್ಯಾಂಕ್ ಹೇಳಿದೆ.

ಈ ಸಂಖ್ಯೆಯು 2017ರ 9.2 ಶೇಕಡ ದರಕ್ಕೆ ಸಮವಾಗಿದೆ. ಒಂದು ವೇಳೆ, ಸಾಂಕ್ರಾಮಿಕ ಜಗತ್ತಿಗೆ ಅಪ್ಪಳಿಸದಿರುತ್ತಿದ್ದರೆ, ಬಡತನ ದರವು 2020ರಲ್ಲಿ 7.9 ಶೇಕಡಕ್ಕೆ ಇಳಿದಿರುತ್ತಿತ್ತು ಎಂದು ಬ್ಯಾಂಕ್‌ನ ದ್ವೈವಾರ್ಷಿಕ ‘ಪವರ್ಟಿ ಆ್ಯಂಡ್ ಶೇರ್ಡ್ ಪ್ರಾಸ್ಪರಿಟಿ ರಿಪೋರ್ಟ್’ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News