ಇಸ್ರೇಲ್, ಫೆಲೆಸ್ತೀನ್ ಮಾತುಕತೆಯ ವೇದಿಕೆಗೆ ಮರಳಬೇಕು: ಯುಎಇ ವಿದೇಶ ಸಚಿವ

Update: 2020-10-07 18:23 GMT

ಬರ್ಲಿನ್ (ಜರ್ಮನಿ), ಅ. 7: ಯುಎಇ ಮತ್ತು ಇಸ್ರೇಲ್ ನಡುವೆ ಸೆಪ್ಟಂಬರ್ 15ರಂದು ಶಾಂತಿ ಒಪ್ಪಂದ ಏರ್ಪಟ್ಟ ಬಳಿಕ, ಮಧ್ಯಪ್ರಾಚ್ಯ ವಲಯದಲ್ಲಿ ಭದ್ರತೆ ಮತ್ತು ಸಮೃದ್ಧತೆಯ ಹೊಸ ಯುಗವೊಂದು ಆರಂಭವಾಗಿದೆ ಎಂದು ಯುಎಇಯ ವಿದೇಶ ವ್ಯವಹಾರಗಳ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಾಯಿದ್ ಅಲ್ ನಹ್ಯಾನ್ ಹೇಳಿದ್ದಾರೆ.

ಜರ್ಮನಿ ರಾಜಧಾನಿ ಬರ್ಲಿನ್‌ನಲ್ಲಿ ಮಂಗಳವಾರ ಜರ್ಮನಿ ವಿದೇಶ ಸಚಿವ ಹೈಕೊ ಮಾಸ್ ಮತ್ತು ಇಸ್ರೇಲ್ ವಿದೇಶ ಸಚಿವ ಗಬಿ ಅಶ್ಕೆನಝಿ ಜೊತೆಗೆ ನೀಡಿದ ಜಂಟಿ ಹೇಳಿಕೆಯೊಂದರಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.

‘‘ಇಸ್ರೇಲ್ ಮತ್ತು ಫೆಲೆಸ್ತೀನ್‌ಗಳು ಎರಡು-ದೇಶ ಪರಿಹಾರಕ್ಕಾಗಿ ಮಾತುಕತೆಯ ವೇದಿಕೆಗೆ ಮರಳುವುದನ್ನು ನಾವಿಂದು ಖಚಿತಪಡಿಸಬೇಕು ಹಾಗೂ ಆ ಮೂಲಕ ಈ ವಲಯದ ಮಕ್ಕಳಿಗೆ ಭವ್ಯ ಭವಿಷ್ಯವನ್ನು ನಿರ್ಮಿಸಬೇಕು’’ ಎಂದು ಶೇಖ್ ಅಬ್ದುಲ್ಲಾ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News