ಐತಿಹಾಸಿಕ ಕ್ಯಾಥಡ್ರೆಲ್ ಮೇಲೆ ಶೆಲ್ ದಾಳಿ: ಆರ್ಮೇನಿಯ ಆರೋಪ

Update: 2020-10-08 16:52 GMT

ಕಯೆರವಾನ್ (ಆರ್ಮೇನಿಯ), ಅ. 8: ನಗೋರ್ನೊ-ಕರಬಾಖ್‌ನಲ್ಲಿರುವ ಐತಿಹಾಸಿಕ ಕ್ಯಾಥಡ್ರೆಲೊಂದರ ಮೇಲೆ ಅಝರ್‌ಬೈಜಾನ್ ಶೆಲ್ ದಾಳಿ ನಡೆಸಿದೆ ಎಂದು ಆರ್ಮೇನಿಯ ಗುರುವಾರ ಆರೋಪಿಸಿದೆ.

ನಗೋರ್ನೊ-ಕರಬಾಖ್‌ನ ಶುಶಾ ನಗರದಲ್ಲಿರುವ ಹೋಲಿ ಸೇವಿಯರ್ ಕ್ಯಾಥಡ್ರೆಲ್‌ನ ಒಳ ಮತ್ತು ಹೊರಭಾಗಗಳೆರಡೂ ಹಾನಿಗೀಡಾಗಿರುವುದನ್ನು ಚಿತ್ರಗಳು ತೋರಿಸಿವೆ.

ವಿವಾದಾಸ್ಪದ ನಗೋರ್ನೊ-ಕರಬಾಖ್‌ನ ಸ್ವಾಧೀನಕ್ಕಾಗಿ ಆರ್ಮೇನಿಯ ಮತ್ತು ಅಝರ್‌ಬೈಜಾನ್ ದೇಶಗಳ ನಡುವೆ ಸೆಪ್ಟಂಬರ್ 27ರಂದು ಸ್ಫೋಟಿಸಿದ ಹೊಸ ಯುದ್ಧದಿಂದಾಗಿ ಈವರೆಗೆ 300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ ಸಾವಿರಾರು ಮಂದಿ ನಿರ್ವಸಿತರಾಗಿದ್ದಾರೆ.

ಯುದ್ಧವನ್ನು ನಿಲ್ಲಿಸುವ ಉದ್ದೇಶದಿಂದ ಅಮೆರಿಕ, ರಶ್ಯ ಮತ್ತು ಫ್ರಾನ್ಸ್‌ಗಳ ನಿಯೋಗಗಳು ಸಂಧಾನ ಆರಂಭಿಸಿವೆ. ಅವರು ಗುರುವಾರ ಜಿನೀವದಲ್ಲಿ ಅಝರ್‌ಬೈಜಾನ್‌ನ ವಿದೇಶ ಸಚಿವರನ್ನು ಭೇಟಿಯಾಗಿದ್ದಾರೆ. ಆರ್ಮೇನಿಯನ್ ವಿದೇಶ ಸಚಿವರು ಸೋಮವಾರ ಮಾಸ್ಕೋದಲ್ಲಿ ರಶ್ಯದ ವಿದೇಶ ಸಚಿವರನ್ನು ಭೇಟಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News