ನಕಲಿ ಟಿಆರ್​ಪಿ ಜಾಲದಲ್ಲಿರುವ ವಾಹಿನಿಗಳಿಗೆ ಜಾಹೀರಾತು ನೀಡುವುದಿಲ್ಲ: ರಾಜೀವ್ ಬಜಾಜ್

Update: 2020-10-09 12:05 GMT

ಮುಂಬೈ: ಮೂರು ಟೆಲಿವಿಷನ್ ಚಾನೆಲುಗಳ 'ನಕಲಿ ಟಿಆರ್​ಪಿಪಿ' ಜಾಲವನ್ನು ಬೇಧಿಸಿ ಮುಂಬೈ ಪೊಲೀಸರು ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಖ್ಯಾತ ಕೈಗಾರಿಕೋದ್ಯಮಿ ರಾಜೀವ್ ಬಜಾಜ್, ತಮ್ಮ ಸಂಸ್ಥೆ ಬಜಾಜ್ ಆಟೋ ಈ ಮೂರು ಚಾನೆಲುಗಳಿಗೆ ಜಾಹೀರಾತು ನೀಡದೆ ಅವುಗಳನ್ನು ಕಪ್ಪು ಪಟ್ಟಿಯಲ್ಲಿರಿಸಲಿದೆ ಎಂದು ಹೇಳಿದ್ದಾರೆ.

ಸಮಾಜಕ್ಕೆ ಕೆಟ್ಟದ್ದು ಎಂದು ತಿಳಿಯಲಾದ ಯಾವುದರ ಜತೆಗೂ ತಮ್ಮ ಕಂಪೆನಿ ಸಂಬಂಧ ಹೊಂದಿಲ್ಲ ಎಂದು ಬಜಾಜ್ ಆಟೋ ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ರಾಜೀವ್ ಬಜಾಜ್ ತಿಳಿಸಿದ್ದಾರೆ. ಆದರೆ ಈ ವೇಳೆ ಅವರು ಈ ಚಾನೆಲುಗಳ ಹೆಸರುಗಳನ್ನು ಉಲ್ಲೇಖಿಸಿಲ್ಲ.

"ದ್ವೇಷ ಕಾರುವ ಚಾನೆಲುಗಳು ಹಾಗೂ ದೈನಿಕಗಳನ್ನು ನಮ್ಮ ತಂಡಗಳು ಗುರುತಿಸಬಲ್ಲವು, ನಮ್ಮ ಉದ್ಯಮದ ಮೇಲೆ ಅದು ಯಾವುದೇ ಪರಿಣಾಮ ಬೀರಿದರೂ ಚಿಂತೆಯಿಲ್ಲ, ಅಂತಹ ಮಾಧ್ಯಮಗಳಿಗೆ ನಾವು ಬೆಂಬಲ ನೀಡುವುದನ್ನು ಮುಂದುವರಿಸಲು ಸಾಧ್ಯವಿಲ್ಲ,'' ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News