ಸಿರಿಯದಲ್ಲಿ ಕಾಡ್ಗಿಚ್ಚು: 2 ಸಾವು
Update: 2020-10-11 22:41 IST
ಡಮಾಸ್ಕಸ್ (ಸಿರಿಯ), ಅ. 11: ಸಿರಿಯ ಮತ್ತು ನೆರೆಯ ಲೆಬನಾನ್‌ನಲ್ಲಿ ದಾಂಧಲೆಗೈಯುತ್ತಿರುವ ಕಾಡ್ಗಿಚ್ಚಿನಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಗುರುವಾರದಿಂದ ಅಗಾಧ ಪ್ರಮಾಣದ ಜಮೀನು ಸುಟ್ಟು ಹೋಗಿದೆ.
ಸಿರಿಯದ ಕರಾವಳಿ ರಾಜ್ಯಗಳಾದ ಲಟಕಿಯ ಮತ್ತು ಟಾರ್ಟಸ್‌ಗಳಲ್ಲಿ ಮತ್ತು ಮಧ್ಯದ ರಾಜ್ಯ ಹೋಮ್ಸ್‌ನ ಹೊರವಲಯಗಳಲ್ಲಿ ನೂರಾರು ಹೆಕ್ಟೇರ್‌ಗಳಷ್ಟು ಜಮೀನು ಬೆಂಕಿಗೆ ಆಹುತಿಯಾಗಿದೆ ಎಂದು ಸಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಲಯದಲ್ಲಿ ನೂರಾರು ಕಡೆಗಳಲ್ಲಿ ಬೆಂಕಿ ಉರಿಯುತ್ತಿದೆ ಎಂದು ಸಿರಿಯದ ಕೃಷಿ ಸಚಿವ ಮುಹಮ್ಮದ್ ಹಸನ್ ಖತಾನ ಹೇಳಿದರು.