×
Ad

ಕೊರೋನ: 5 ದಿನಗಳಲ್ಲಿ ಚೀನಾದ ಇಡೀ ನಗರದ ತಪಾಸಣೆ

Update: 2020-10-12 22:46 IST

ಬೀಜಿಂಗ್, ಅ. 12: ಚೀನಾದ ಬಂದರು ನಗರ ಕಿಂಗಾಡೊದಲ್ಲಿ ಸಣ್ಣ ಪ್ರಮಾಣದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಸ್ಫೋಟಿಸಿರುವ ಹಿನ್ನೆಲೆಯಲ್ಲಿ, ಐದು ದಿನಗಳ ಒಳಗೆ ನಗರದ 90 ಲಕ್ಷಕ್ಕೂ ಅಧಿಕ ನಿವಾಸಿಗಳನ್ನು ತಪಾಸಣೆಗೆ ಒಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಚೀನಾದಲ್ಲಿ ಮೊದಲು ಕೊರೋನ ವೈರಸ್ ಸಾಂಕ್ರಾಮಿಕ ಕಾಣಿಸಿಕೊಂಡಿದ್ದು, ಬಳಿಕ ಅದು ವಿಶ್ವಾದ್ಯಂತ ಹರಡಿದೆ. ಚೀನಾದಲ್ಲಿ ಸೋಂಕು ಹರಡುವಿಕೆ ಬಹುತೇಕ ನಿಂತಿದ್ದರೂ, ಅಲ್ಲಲ್ಲಿ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.

ಈಶಾನ್ಯದ ನಗರ ಕಿಂಗಾಡೊದಲ್ಲಿ ರವಿವಾರ ಆರು ಕೊರೋನ ವೈರಸ್ ಪ್ರಕರಣಗಳು ದೃಢಪಟ್ಟಿವೆ ಎಂದು ಕಿಂಗಾಡೊ ಮುನಿಸಿಪಲ್ ಆರೋಗ್ಯ ಆಯೋಗ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಐದು ಜಿಲ್ಲೆಗಳನ್ನು ಮೂರು ದಿನಗಳಲ್ಲಿ ಮತ್ತು ಇಡೀ ನಗರವನ್ನು ಐದು ದಿನಗಳಲ್ಲಿ ತಪಾಸಣೆಗೆ ಒಳಪಡಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News