ನೀರಿನಡಿಯಲ್ಲಿ ಸ್ಫೋಟಿಸಿದ 2ನೇ ಮಹಾಯುದ್ಧ ಕಾಲದ ಬಾಂಬ್

Update: 2020-10-14 18:09 GMT

ವಾರ್ಸಾ (ಪೋಲ್ಯಾಂಡ್), ಅ. 14: ಎರಡನೇ ಮಹಾಯುದ್ಧ ಕಾಲದ, 5,000 ಕಿ.ಗ್ರಾಂ. ತೂಗುವ ಬೃಹತ್ ಬಾಂಬೊಂದನ್ನು ಪೋಲ್ಯಾಂಡ್‌ನ ಬಾಲ್ಟಿಕ್ ಸಮುದ್ರ ಸಮೀಪದ ಕಾಲುವೆಯೊಂದರಲ್ಲಿ ಮಂಗಳವಾರ ನಿಷ್ಕ್ರಿಯಗೊಳಿಸಲಾಯಿತು. ಈ ಪ್ರಕ್ರಿಯೆ ಕೊನೆಯಲ್ಲಿ ಬಾಂಬ್ ಸ್ಫೋಟಿಸಿತು. ಕಾರ್ಯಾಚರಣೆಯಲ್ಲಿ ಯಾರಿಗೂ ಗಾಯವಾಗಿಲ್ಲ.

‘ಟಾಲ್‌ಬಾಯ್’ ಎಂಬ ಹೆಸರಿನ ಈ ಬಾಂಬನ್ನು 1945ರಲ್ಲಿ ರಾಯಲ್ ಏರ್‌ಫೋರ್ಸ್ ನಾಝಿ ಯುದ್ಧನೌಕೆಯೊಂದರ ಮೇಲೆ ಹಾಕಲಾಗಿತ್ತು. ಕಳೆದ ವರ್ಷ ಬಂದರು ನಗರ ಸ್ವಿನೊಸೈಗೆ ಸಮೀಪದ ಕಾಲುವೆಯ ಹೂಳೆತ್ತುವಾಗ 12 ಮೀಟರ್ ಆಳದಲ್ಲಿ ಬಾಂಬ್ ಪತ್ತೆಯಾಗಿತ್ತು. ಈ ಸಂದರ್ಭದಲ್ಲಿ 2.5 ಕಿ.ಮೀ. ತ್ರಿಜ್ಯದಲ್ಲಿರುವ ನೂರಾರು ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News