ಐಪಿಎಲ್ ಇತಿಹಾಸದಲ್ಲೇ ಅತಿ ವೇಗದ ಎಸೆತಗಾರ ನಾರ್ಟ್ಜೆ

Update: 2020-10-15 18:56 GMT

ಶಾರ್ಜಾ: ದಿಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್ ಅನ್ರಿಚ್ ನಾರ್ಟ್ಜೆ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಎಸೆತವನ್ನು ದಾಖಲಿಸಿದ್ದಾರೆ.

ದಕ್ಷಿಣ ಆಫ್ರಿಕದ 26ರ ಹರೆಯದ ನಾರ್ಟ್ಜೆಅವರು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 156.22 ಕಿ.ಮೀ. ವೇಗದಲ್ಲಿ ಬೌಲಿಂಗ್ ನಡೆಸುವ ಮೂಲಕ ಐಪಿಎಲ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನಿ(154.40 ಕೆಎಂಪಿಎಚ್) ದಾಖಲೆಯನ್ನು ನಾರ್ಟ್ಜೆ ಮುರಿದಿದ್ದಾರೆ. ನಾರ್ಟ್ಜೆ ಮೂರನೇ ಓವರ್‌ನಲ್ಲಿ ವೇಗದ ಎಸೆತದ ದಾಖಲೆ ಬರೆದಿದ್ದಾರೆ. ಜೋಸ್ ಬಟ್ಲರ್ ಅವರು ನಾರ್ಟ್ಜೆರ ಮೊದಲ ಎಸೆತ (148.2)ದಲ್ಲಿ ಜೋಸ್ ಬಟ್ಲರ್ ಸಿಕ್ಸರ್ ಸಿಡಿಸಿದರು ಎರಡನೇ ಎಸೆತ(152.3) -ಬಟ್ಲರ್ 1ರನ್, 3ನೇ ಎಸೆತದಲ್ಲಿ (152.1) ಸ್ಟೋಕ್ಸ್ 1 ರನ್, 4ನೇ ಎಸೆತ (146.4)- ಬಟ್ಲರ್ 4 ರನ್, ನಾರ್ಟ್ಜೆರ5ನೇ ಎಸೆತ (156.22) ಅತ್ಯಂತ ವೇಗದ ಎಸೆತದಲ್ಲಿ ಬಟ್ಲರ್ ಸಿಕ್ಸರ್ ಬಾರಿಸಿದರು. ಅಂತಿಮ ಎಸೆತ (155.1) ಇದರಲ್ಲಿ ಬಟ್ಲರ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

  

ಆಫ್ರಿಕಾದ ಡೇಲ್ ಸ್ಟೇನ್ 2012ರಲ್ಲಿ ದಾಖಲಿಸಿದ ಬೌಲಿಂಗ್ ವೇಗ 154.40 ಕಿ.ಮೀ. ಅವರು 4 ಓವರ್‌ಗಳಲ್ಲಿ 33ಕ್ಕೆ 2 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 13 ರನ್‌ಗಳ ಜಯ ಗಳಿಸಿತ್ತು. ನಾರ್ಟ್ಜೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ನಾರ್ಟ್ಜೆ ಈ ಋತುವಿನ ಐಪಿಎಲ್‌ನ 8 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ.

 ‘‘ವೇಗದ ಎಸೆತದ ಬಗ್ಗೆ ನನಗೆ ತಿಳಿದಿರಲಿಲ್ಲ. ವೇಗವನ್ನು ಹೆಚ್ಚಿಸಲು ನಾನು ನಿಜವಾಗಿಯೂ ಶ್ರಮಿಸುತ್ತಿದ್ದೇನೆ’’ ಎಂದು ನಾರ್ಟ್ಜೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News