ಚಾಕಲೇಟ್ ರೂಪದ ಗಾಂಜಾ ಮಾರಾಟ ದಂಧೆ ಭೇದಿಸಿದ ಅಧಿಕಾರಿಗಳು

Update: 2020-10-16 12:01 GMT

ಬೆಂಗಳೂರು, ಅ.16: ಚಾಕಲೇಟ್ ರೂಪದಲ್ಲಿ ಗಾಂಜಾ ಮಾರುತ್ತಿದ್ದ ದಂಧೆಯೊಂದನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ಭೇದಿಸಿದ್ದಾರೆ.

ಇಲ್ಲಿನ ಸುಬ್ರಮಣ್ಯ ನಗರದ ಬೀಡಾ ಅಂಗಡಿಯೊಂದರಲ್ಲಿ ಚಾಕಲೇಟ್ ಗಾಂಜಾ ಮಾರಾಟ ದಂಧೆ ಮಾಹಿತಿ ಮೇರೆಗೆ ಉತ್ತರ ವಿಭಾಗದ ಜಂಟಿ ಆಯುಕ್ತ ನಾಗರಾಜಪ್ಪ ನೇತೃತ್ವದ ತಂಡ ದಾಳಿ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.  

ಗುಲಾಬ್ ಯಾದವ್ ಎಂಬಾತ ಈ ದಂಧೆ ನಡೆಸುತ್ತಿದ್ದ ಎಂದು ಹೇಳಲಾಗುತ್ತಿದೆ. ಈತನ ಅಂಗಡಿಯಲ್ಲಿ 20 ಸಾವಿರ ರೂ. ಮೌಲ್ಯದ 2.2 ಕೆ.ಜಿ ಗಾಂಜಾ ಚಾಕಲೇಟ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಚಾಕಲೇಟ್ ಗಾಂಜಾ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಯ ಹಿನ್ನೆಲೆ, ಡ್ರಗ್ಸ್ ಸರಬರಾಜು ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News