ಬಲೂಚಿಸ್ತಾನ: ದಾಳಿಯಲ್ಲಿ 14 ಭದ್ರತಾ ಸಿಬ್ಬಂದಿ ಸಾವು

Update: 2020-10-16 18:22 GMT

ಕ್ವೆಟ್ಟಾ (ಪಾಕಿಸ್ತಾನ), ಅ. 16: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಗುರುವಾರ ಅರೈಸೈನಿಕ ಪಡೆಗಳ ವಾಹನಗಳ ಸಾಲಿನ ಮೇಲೆ ನಡೆದ ಬಂದೂಕು ಮತ್ತು ರಾಕೆಟ್ ದಾಳಿಯಲ್ಲಿ ಏಳು ಸೈನಿಕರು ಮತ್ತು ಏಳು ಖಾಸಗಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ.

ಈ ಸೈನಿಕರು ಕರಾಚಿ ನಗರದಿಂದ ಬಲೂಚಿಸ್ತಾನದ ಗವಡರ್ ಬಂದರು ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದ ತೈಲ ಮತ್ತು ಅನಿಲ ಅಭಿವೃದ್ಧಿ ಕಂಪೆನಿಯ ಅಧಿಕಾರಿಗಳಿಗೆ ಬೆಂಗಾವಲಾಗಿ ಪ್ರಯಾಣಿಸುತ್ತಿದ್ದರು.

ತೈಲ ಕಂಪೆನಿಯ ಅಧಿಕಾರಿಗಳು ಅಪಾಯದಿಂದ ಪಾರಾಗಿದ್ದಾರೆ, ಆದರೆ, 14 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನಿ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News