ಫ್ರಾನ್ಸ್: 30,000 ದಾಟಿದ ದೈನಂದಿನ ಕೊರೋನ ಸೋಂಕು

Update: 2020-10-16 18:25 GMT

ಪ್ಯಾರಿಸ್ (ಫ್ರಾನ್ಸ್), ಅ. 16: ಫ್ರಾನ್ಸ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನ ವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ ದಾಖಲೆಯ 30,000ವನ್ನು ದಾಟಿದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.

24 ಗಂಟೆಗಳ ಅವಧಿಯಲ್ಲಿ 30,621 ಕೋವಿಡ್-19 ಸೋಂಕು ಪ್ರಕರಣಗಳು ದಾಖಲಾಗಿವೆ ಹಾಗೂ ಇದು ಒಂದು ದಿನದ ದಾಖಲೆಯಾಗಿದೆ ಎಂದು ದೇಶದ ಸಾರ್ವಜನಿಕ ಆರೋಗ್ಯ ಸಂಸ್ಥೆ ತಿಳಿಸಿದೆ.

ಇದೇ ಅವಧಿಯಲ್ಲಿ ಸಾಂಕ್ರಾಮಿಕದಿಂದಾಗಿ 88 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಫ್ರಾನ್ಸ್‌ನಲ್ಲಿ ಕೊರೋನ ವೈರಸ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 33,125ಕ್ಕೆ ಏರಿದೆ.

ದೈನಂದಿನ ಕೊರೋನ ವೈರಸ್ ಪ್ರಕರಣಗಳು ಅಪಾಯಕಾರಿ ವೇಗದಲ್ಲಿ ಹೆಚ್ಚುತ್ತಿರುವಂತೆಯೇ, ದೇಶದ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಬುಧವಾರ ಪ್ಯಾರಿಸ್ ಮತ್ತು ಇತರ 8 ನಗರಗಳಲ್ಲಿ ರಾತ್ರಿ ಕರ್ಫ್ಯೂವನ್ನು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News