ನಾಗಪುರ ಕಾರಾಗೃಹದಲ್ಲಿ ಔಷಧ, ಬಟ್ಟೆ ನಿರಾಕರಿಸಿ ಉಪವಾಸ ಧರಣಿಗೆ ಜಿ.ಎನ್. ಸಾಯಿಬಾಬಾ ನಿರ್ಧಾರ

Update: 2020-10-17 17:26 GMT

ಹೊಸದಿಲ್ಲಿ, ಅ. 17: ಮಾವೋವಾದಿ ನಂಟು ಹೊಂದಿರುವ ಆರೋಪದಲ್ಲಿ ನಾಗಪುರದ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರೊ. ಜಿ.ಎನ್. ಸಾಯಿಬಾಬಾ ಅವರು ತಿಂಗಳಿಂದ ಬಟ್ಟೆ, ಔಷಧ ಹಾಗೂ ಪುಸ್ತಕಗಳನ್ನು ಪೂರೈಸದ ಹಿನ್ನೆಲೆಯಲ್ಲಿ ಅಕ್ಟೋಬರ್ 21ರಿಂದ ಉಪವಾಸ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಕಾರಾಗೃಹದಲ್ಲಿ ಅವರಿಗೆ ಔಷಧ, ಬಟ್ಟೆ ಹಾಗೂ ಪುಸ್ತಕಗಳನ್ನು ನೀಡಲು ನಿರಾಕರಿಸಲಾಗುತ್ತಿದೆ ಎಂದು ಸಾಯಿಬಾಬಾ ಅವರ ಪತ್ನಿ ಎ.ಎಸ್. ವಸಂತ ಕುಮಾರಿ ಹೇಳಿದ್ದಾರೆ. 2014ರಿಂದ ಕಾರಾಗೃಹದಲ್ಲಿರುವ ಸಾಯಿಬಾಬಾ ಅವರಿಗೆ ಮೂಲಭೂತ ಮಾನವ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಕಳೆದ ಒಂದು ತಿಂಗಳಿಂದ ಅವರಿಗೆ ಯಾವುದೇ ಪತ್ರ ಅಥವಾ ಫೋನ್ ಕರೆಗಳನ್ನು ನೀಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಾಯಿಬಾಬಾ ಅವರು ಕಾರಾಗೃಹದಲ್ಲಿ ಎದುರಿಸುತ್ತಿರುವ ಕಷ್ಟ, ಕಿರುಕುಳ ಹಾಗೂ ಅನ್ಯಾಯದ ನಿರ್ಬಂಧಗಳ ಬಗ್ಗೆ ವಸಂತ ಕುಮಾರಿ ಅವರು ಮಹಾರಾಷ್ಟ್ರ ಕಾರಾಗೃಹದ ಹೆಚ್ಚುವರಿ ಪ್ರಧಾನ ನಿರ್ದೇಶಕ ಸುನೀಲ್ ರಮಾನಂದ್ ಹಾಗೂ ನಾಗಪುರ ಕಾರಾಗೃಹದ ಅಧೀಕ್ಷಕ ಅನೂಪ್‌ಕುಮಾರ್ ಕುಮ್ರೆ ಅವರಿಗೆ ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News