40,075 ಕಿ.ಮೀ. ನಡೆದು ಅನಿವಾಸಿ ಭಾರತೀಯನ ಗಿನ್ನೆಸ್ ದಾಖಲೆ?

Update: 2020-10-17 18:18 GMT

ಲಂಡನ್,ಅ.17: ಐಯರ್‌ಲ್ಯಾಂಡ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ವಿನೋದ್ ಬಜಾಜ್ ಅವರು 1500 ದಿನಗಳ ಅವಧಿಯಲ್ಲಿ 40,075 ಕಿ.ಮೀ. ನಡೆದಿದ್ದು ಆ ಮೂಲಕ ಗಿನ್ನೆಸ್ ವಿಶ್ವದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಳ್ಳುವ ತವಕದಲ್ಲಿದ್ದಾರೆ.

 ತನ್ನ 40,075 ಕಿ.ಮೀ. ನಡಿಗೆಯನ್ನು ಅವರು ‘ಭೂನಡಿಗೆ’ ಎಂದು ಬಣ್ಣಿಸಿದ್ದು, ಇದು ಭೂಮಿಯ ಸುತ್ತಳತೆಗೆ ಸರಿಸಮಾನವೆಂದು ಅವರು ಹೇಳಿದ್ದಾರೆ. ತಾನು ನೆಲೆಸಿರುವ ಲಿಮ್‌ರಿಕ್ ಪಟ್ಟಣದಲ್ಲಿದ್ದುಕೊಂಡೇ ಅವರು ಈ ಸಾಧನೆ ಮಾಡಿದ್ದಾರೆ. ತೂಕವನ್ನು ಕಳೆದುಕೊಳ್ಳುವ ಹಾಗೂ ಆರೋಗ್ಯವನ್ನು ಕಾಪಾಡು ಉದ್ದೇಶದಿಂದ ವಿನೋದ್ ಬಜಾಜ್ ಅವರು 2016ರ ಆಗಸ್ಟ್‌ನಲ್ಲಿ ತನ್ನ ಕಾಲ್ನಡಿಗೆಯ ಪಯಣವನ್ನು ಆರಂಭಿಸಿದ್ದರು.

ತನ್ನ ನಿವಾಸವಿರುವ ಲಿಮೆರಿಕ್ ಪಟ್ಟಣದ ಕ್ಯಾಸಲ್‌ರಾಯ್ ಪ್ರದೇಶದ 10 ಕಿ.ಮೀ.. ವ್ಯಾಪ್ತಿಯೊಳಗೆ ಅವರು ತನ್ನ ಕಾಲ್ನಡಿಗೆ ಯಾತ್ರೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News