ಉದ್ಧವ್ ಠಾಕ್ರೆಗೆ ರಾಜ್ಯಪಾಲರು ಬರೆದ ಪತ್ರದಲ್ಲಿ ಸಂಯಮದ ಪದ ಬಳಸಬೇಕಾಗಿತ್ತು: ಅಮಿತ್ ಶಾ

Update: 2020-10-18 06:10 GMT

  ಹೊಸದಿಲ್ಲಿ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದ ಪತ್ರದಲ್ಲಿ ಜಾತ್ಯತೀತ ಪದ ಬಳಸಿರುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಪಾಲರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪತ್ರದಲ್ಲಿ ಪದ ಆಯ್ಕೆ ವೇಳೆ ಅವರು ಸಂಯಮ ಪಾಲಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
"ನಾನು ಆ ಪತ್ರವನ್ನು ನೋಡಿದ್ದೇನೆ. ಆದರೆ, ಅವರು ಪದ ಬಳಕೆಯ ವೇಳೆ ಹೆಚ್ಚು ಸಂಯಮ ಹೊಂದಿರಬೇಕಿತ್ತು ಎನ್ನುವುದು ನನ್ನ ಭಾವನೆ'' ಎಂದು ಟಿವಿ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದ ವೇಳೆ ಶಾ ಹೇಳಿದ್ದಾರೆ.

ರಾಜ್ಯದಲ್ಲಿ ವಾಣಿಜ್ಯ ಚಟುವಟಿಕೆಗಳ ಆರಂಭಕ್ಕೆ ಅನುಮತಿ ನೀಡಿರುವ, ಪೂಜಾಸ್ಥಳಗಳನ್ನು ಇನ್ನೂ ತೆರೆಯದಿರುವ ಮಹಾರಾಷ್ಟ್ರ ಸರಕಾರದ ನಿರ್ಧಾರವನ್ನು ಆಕ್ಷೇಪಿಸಿದ್ದ ರಾಜ್ಯಪಾಲ ಭಗತ್ ಸಿಂಗ್ "ನೀವು ಜಾತ್ಯತೀತರಾಗಿದ್ದು ಯಾವಾಗ'' ಎಂದು ಸಿಎಂ ಉದ್ಧವ್ ಠಾಕ್ರೆಗೆ ಬರೆದ ಪತ್ರದಲ್ಲಿ ಪ್ರಶ್ನಿಸಿದ್ದರು.

ರಾಜ್ಯಪಾಲರ ಪ್ರಶ್ನೆಗೆ ಉದ್ಧವ್ ಠಾಕ್ರೆ ಕೂಡ ತಕ್ಕ ಉತ್ತರವನ್ನು ನೀಡಿದ್ದರು. ಮಹಾರಾಷ್ಟ್ರದ ರಾಜ್ಯಪಾಲರು-ಸಿಎಂ ನಡುವಿನ ಪತ್ರ ಸಮರ ಭಾರೀ ಸುದ್ದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News