ಉತ್ತರಪ್ರದೇಶ: ಸ್ಥಳೀಯ ಬಿಜೆಪಿ ನಾಯಕ ಧೀರೇಂದ್ರ ಸಿಂಗ್ ಬಂಧನ

Update: 2020-10-18 07:05 GMT

ಲಕ್ನೊ: ಉತ್ತರಪ್ರದೇಶದ ಬಲ್ಲಿಯಾದ ಗ್ರಾಮದಲ್ಲಿ ಇತ್ತೀಚೆಗೆ ಪಡಿತರ ಅಂಗಡಿ ಹಂಚಿಕೆಗೆ ಸಂಬಂಧಿಸಿ ಉಂಟಾದ ಮಾತಿನ ಚಕಮಕಿಯ ವೇಳೆ ವ್ಯಕ್ತಿಯೊಬ್ಬನನ್ನು ಪೊಲೀಸರು ಹಾಗೂ ಸರಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಗುಂಡಿಟ್ಟು ಕೊಂದ ಆರೋಪದಲ್ಲಿ ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಇತರ ಇಬ್ಬರನ್ನು ಬಂಧಿಸಲಾಗಿದ್ದು, ಅವರಿಂದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ.

 ಬಲ್ಲಿಯಾ ಶೂಟಿಂಗ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಧೀರೇಂದ್ರ ಸಿಂಗ್‌ನನ್ನು ಉತ್ತರಪ್ರದೇಶದ ಪೊಲೀಸರು ರವಿವಾರ ಬಂಧಿಸಿದ್ದಾರೆ. ಲಕ್ನೊದ ಜಾನೇಶ್ವರ ಮಿಶ್ರಾ ಪಾರ್ಕ್ ಸಮೀಪ ಉತ್ತರಪ್ರದೇಶ ವಿಶೇಷ ಕಾರ್ಯಪಡೆ(ಎಸ್‌ಟಿಎಫ್)ಬಂಧಿಸಿದೆ. ಇನ್ನಿಬ್ಬರು ಆರೋಪಿಗಳಾದ ಸಂತೋಷ್ ಯಾದವ್ ಹಾಗೂ ಮರಜೀತ್ ಯಾದವ್‌ನನ್ನು ಬಂಧಿಸಲಾಗಿದೆ. ಈ ತನಕ ಘಟನೆಗೆ ಸಂಬಂಧಿಸಿ 10 ಮಂದಿಯನ್ನು ಬಂಧಿಸಲಾಗಿದೆ.

ಗುಂಡಿನ ಹಾರಾಟದಲ್ಲಿ ಜೈ ಪ್ರಕಾಶ್(46 ವರ್ಷ)ಎಂಬಾತ ಸಾವನ್ನಪ್ಪಿದ ಬಳಿಕ ಧೀರೇಂದ್ರ ಸಿಂಗ್ ತಲೆ ಮರೆಸಿಕೊಂಡಿದ್ದ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News