ಕೋವಿಡ್ ಔಷಧಿಗಳ ಬೌದ್ಧಿಕ ಆಸ್ತಿ ಹಕ್ಕು ರದ್ದು: ಭಾರತದ ಪ್ರಸ್ತಾವಕ್ಕೆ ಅಮೆರಿಕ, ಇಯು ವಿರೋಧ, ಪಾಕ್ ಬೆಂಬಲ

Update: 2020-10-18 17:34 GMT

 ಜಿನೇವ,ಅ.18: ಕೋವಿಡ್-19 ಲಸಿಕೆಗೆ ಸಂಬಂಧಿಸಿದ ಬೌದ್ಧಿಕ ಆಸ್ತಿಯ ಹಕ್ಕುಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಬೇಕೆಂದು ಕೋರಿ ಭಾರತ ಹಾಗೂ ದಕ್ಷಿಣ ಆಫ್ರಿಕದ ಪ್ರಸ್ತಾವವನ್ನು ಬೆಂಬಲಿಸಲು ಅಮೆರಿಕ, ಯುರೋಪ್ ಒಕ್ಕೂಟ(ಇಯು), ಬ್ರಿಟನ್ ಹಾಗೂ ಬ್ರೆಝಿಲ್ ದೇಶಗಳು ನಿರಾಕರಿಸಿವೆ.

    ಇದೇ ವೇಳೆ ಚೀನಾ, ಪಾಕಿಸ್ತಾನ, ಥಾಯ್ಲೆಂಡ್,ಇಂಡೋನೇಶ್ಯ ಹಾಗೂ ಟರ್ಕಿ ಸೇರಿದಂತೆ ಹಲವಾರು ಅಭಿವೃದ್ಧಿಶೀಲ ದೇಶಗಳು ಭಾರತದ ಪ್ರಸ್ತಾವವನ್ನು ಬೆಂಬಲಿಸಿವೆ. ಕೊರೋನ ವೈರಸ್ ಲಸಿಕೆಯ ತಯಾರಿಕೆಗೆ ಸಂಬಂಧಿಸಿದ ಬೌದ್ಧಿಕ ಆಸ್ತಿಯ ಹಕ್ಕುಗಳನ್ನು ರದ್ದುಪಡಿಸಬೇಕೆಂದು ಕೋರಿ ಭಾರತ, ದ.ಆಫ್ರಿಕ ಸಲ್ಲಿಸಿರುವ ಪ್ರಸ್ತಾವ ವಿಶ್ವ ವಾಣಿಜ್ಯ ಸಂಸ್ಥೆ ಯು ಪರಿಶೀಲನೆಯಲ್ಲಿದ್ದು, ಆದಕ್ಕೆ ಈ ವರ್ಷದ ಅಂತ್ಯದೊಳಗೆ ಅಂಗೀಕಾರ ದೊರೆಯಬೇಕಿದೆ.ಆದರೆ ವಿಶ್ವ ಆರೋಗ್ಯ ಸಂಸ್ಥೆಯು ಈ ಪ್ರಸ್ತಾವವನ್ನು ಬಲವಾಗಿ ಬೆಂಬಲಿಸಿದೆ. ‘‘ ಅಗತ್ಯವಿರುವ ಎಲ್ಲರಿಗೂ ಯೋಗ್ಯದರದಲ್ಲಿ ಕೋವಿಡ್-19ಗೆ ಸಂಬಂಧಿಸಿದ ಲಸಿಕೆಗಳು, ಚಿಕಿತ್ಸೆಗಳು ಹಾಗೂ ಪರೀಕ್ಷೆಗಳು ಲಭ್ಯವಾಗುವಂತೆ ಮಾಡಲು ಅಂತರ್ ರಾಷ್ಟ್ರೀಯ ಹಾಗೂ ಬೌದ್ಧಿಕ ಆಸ್ತಿಯ ಒಪ್ಪಂದಗಳನ್ನು ಸರಳಗೊಳಿಸಬೇಕೆಂಬ ದಕ್ಷಿಣ ಆಫ್ರಿಕ ಹಾಗೂ ಭಾರತದ ಪ್ರಸ್ತಾವವನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ವಾಗತಿಸುತ್ತದೆ.’’ ಎಂದು ಅದು ಟ್ವೀಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News