ಹಿಮಾಚಲ ಮೂಲದ ವೈದ್ಯ ಈಗ ನ್ಯೂಝಿಲ್ಯಾಂಡ್ ಸಂಸದ

Update: 2020-10-19 06:50 GMT
Twitter/@gmsharmanz

ಹೊಸದಿಲ್ಲಿ: ಶನಿವಾರ ನ್ಯೂಝಿಲ್ಯಾಂಡ್ ಸಂಸತ್ತಿಗೆ ನೂತನವಾಗಿ ಆಯ್ಕೆಯಾದ ಸಂಸದರ ಪೈಕಿ ಒಬ್ಬರಾಗಿರುವ ಅಲ್ಲಿನ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಅವರ ಲೇಬರ್ ಪಾರ್ಟಿಯ ಡಾ. ಗೌರವ್ ಶರ್ಮ ಅವರು ಮೂಲತಃ ಭಾರತೀಯರಾಗಿದ್ದು ಹಿಮಾಚಲ ಪ್ರದೇಶದವರಾಗಿದ್ದಾರೆ. ಹ್ಯಾಮಿಲ್ಟನ್ ವೆಸ್ಟ್ ಕ್ಷೇತ್ರದಿಂದ ಜಯ ಗಳಿಸಿರುವ 33 ವರ್ಷದ ಗೌರವ್ ಅವರು ನ್ಯಾಷನಲ್ ಪಾರ್ಟಿಯ ಟಿಮ್ ಮೆಸಿಂಡೋ ಅವರನ್ನು  4,425 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಗೌರವ ಅವರ ಗೆಲುವಿಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕುರ್ ಅವರನ್ನು ಅಭಿನಂದಿಸಿದ್ದಾರಲ್ಲದೆ. ತಮ್ಮ ರಾಜ್ಯದ ಹಮೀರ್ಪುರ್‍ನ ಗಲೋಡ್ ಮೂಲದವರಾಗಿರುವ ಗೌರವ್ ಹಿಮಾಚಲ ಪ್ರದೇಶ ಹಾಗೂ ಭಾರತಕ್ಕೆ ಹೆಮ್ಮೆ ತಂದಿದ್ದಾರೆ ಎಂದಿದ್ದಾರೆ.

ಡಾ. ಗೌರವ್ ಶರ್ಮ ಅವರು 20 ವರ್ಷಗಳಿಂದ ನ್ಯೂಝಿಲ್ಯಾಂಡ್ನಲ್ಲಿದ್ದಾರೆ. ಹ್ಯಾಮಿಲ್ಟನ್‍ನ ನಾವ್ಟನ್ ಎಂಬಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಅವರು ಮೆಡಿಸಿನ್ ಮತ್ತು ಸರ್ಜರಿಯಲ್ಲಿ ಪದವಿ ಹೊರತಾಗಿ ಅಮೆರಿಕಾದ ಜಾರ್ಜ್ ವಾಷಿಂಗ್ಟನ್ ವಿವಿಯಿಂದ ಎಂಬಿಎ ಪದವಿಯನ್ನೂ ಪಡೆದಿದ್ದಾರೆ.

ಶರ್ಮ ಅವರು 9ನೇ ತರಗತಿಯಲ್ಲಿರುವಾಗಲೇ ಅವರ ಕುಟುಂಬ ನ್ಯೂಝಿಲ್ಯಾಂಡ್ಗೆ ವಲಸೆ ಹೋಗಿತ್ತು  ಹಿಮಾಚಲ ಪ್ರದೇಶ ವಿದ್ಯುತ್ ಮಂಡಳಿಯ ಇಂಜಿನಿಯರ್ ಆಗಿ ಅವರ ತಂದೆ ಈ ಹಿಂದೆ ಸೇವೆ ಸಲ್ಲಿಸಿದ್ದರು, ಆದರೆ ನ್ಯೂಝಿಲ್ಯಾಂಡ್ಗೆ ತೆರಳಿದ ನಂತರ ಅವರ ತಂದೆಗೆ ಉದ್ಯೋಗ ಹುಡುಕಲು ಆರು ವರ್ಷಗಳೇ ಕಳೆದಿದ್ದವಲ್ಲದೆ ಈ ಆರು ವರ್ಷ  ಅವರ ಕುಟುಂಬ ಸ್ವಂತ ಸೂರು ಕೂಡ ಇಲ್ಲದೆ ಅಲೆಯುವಂತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News