×
Ad

ಬ್ರಿಟನ್ ಪ್ರಧಾನಿ ಜಾನ್ಸನ್ ರಾಜೀನಾಮೆ ನೀಡಲು ಚಿಂತನೆ: ಕಾರಣವೇನು ಗೊತ್ತೇ?

Update: 2020-10-19 23:31 IST

ಲಂಡನ್: ಬ್ರಿಟನ್ ಪ್ರಧಾನಮಂತ್ರಿ ಬೊರಿಸ್ ಜಾನ್ಸನ್ ಅವರಿಗೆ ಈ ಹಿಂದಿನ ವೇತನಕ್ಕೆ ಹೋಲಿಸಿದರೆ ಈಗಿನ ವೇತನ(150,402 ಪೌಂಡ್)ಕಡಿಮೆಯಾಗಿರುವುದರಿಂದ ಅವರು  ಮುಂದಿನ ಮಾರ್ಚ್ ವೇಳೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು  ವರದಿಯಾಗಿದೆ.

ಬ್ರಿಟಿಷ್  ಟ್ಯಾಬ್ಲಾಯ್ಡ್ ‘ದಿ ಡೈಲಿ ಮಿರರ್’ ವರದಿಯ ಪ್ರಕಾರ, ಜಾನ್ಸನ್ ಅವರು ದಿನಪತ್ರಿಕೆಯ ಅಂಕಣಬರಹಕ್ಕೆ ತಿಂಗಳಿಗೆ 23,000 ಪೌಂಡ್ ಗಳಿಸುತ್ತಿದ್ದು, ಬ್ರೆಕ್ಸಿಟ್ ಪ್ರಕ್ರಿಯೆ ಮುಗಿದ ಆರು ತಿಂಗಳ ಬಳಿಕ ಅಧಿಕಾರದಿಂದ ನಿರ್ಗಮಿಸಲು ಜಾನ್ಸನ್ ಬಯಸಿದ್ದಾರೆ.

ಬೊರಿಸ್ ಗೆ ಆರು ಮಕ್ಕಳಿದ್ದಾರೆ. ಕೆಲವರು ಸಣ್ಣವರಿರುವ ಕಾರಣ ಅವರಿಗೆ ಹಣಕಾಸು ನೆರವಿನ ಅಗತ್ಯವಿದೆ.ವಿಚ್ಛೇದನದ ಒಪ್ಪಂದ ಪ್ರಕಾರ ಮಾಜಿ ಪತ್ನಿ ಮರಿನಾ ವೀಲರ್ ಗೂ ಹಣವನ್ನು ಪಾವತಿಸಬೇಕಾಗಿದೆ ಎಂದು ಕನ್ಸರ್ವೇಟಿವ್ ಪಕ್ಷದ ಸಂಸದರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಡೈಲಿ ಮಿರರ್ ವರದಿ ಮಾಡಿದೆ.

ಕನ್ಸರ್ವೇಟಿವ್ ಪಕ್ಷದ ನಾಯಕನಾಗುವ ಮೊದಲು ಜಾನ್ಸನ್ ಅವರು ಟೆಲಿಗ್ರಾಫ್ ನಲ್ಲಿ ವರ್ಷಕ್ಕೆ 275,000 ಪೌಂಡ್ ವೇತನ ಪಡೆಯುತ್ತಿದ್ದರು. ಎರಡು ಉಪನ್ಯಾಸಗಳನ್ನು ನೀಡುವ ಮೂಲಕ ತಿಂಗಳಿಗೆ 160,000 ಪೌಂಡ್ ಗಳಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News