×
Ad

ಥಾಯ್ಲೆಂಡ್: ತೀವ್ರಗೊಳ್ಳುತ್ತಿರುವ ಪ್ರಜಾಪ್ರಭುತ್ವ ಪರ ಧರಣಿ

Update: 2020-10-19 23:59 IST

ಬ್ಯಾಂಕಾಕ್ (ಥಾಯ್ಲೆಂಡ್), ಅ. 19: ಥಾಯ್ಲೆಂಡ್‌ನಲ್ಲಿ ಪ್ರಜಾಪ್ರಭುತ್ವ ಪರ ಧರಣಿಗಳನ್ನು ನಡೆಸುತ್ತಿರುವವರು ವ್ಯಾಪಕವಾಗಿ ಬಳಸುವ ಟೆಲಿಗ್ರಾಂ ಸಂದೇಶವಾಹಕ ಆ್ಯಪನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳು ಇಂಟರ್‌ನೆಟ್ ಸೇವಾ ಪೂರೈಕೆದಾರರಿಗೆ ಆದೇಶಿಸಿದ್ದಾರೆ.

ಅದೇ ವೇಳೆ, ಪ್ರತಿಭಟನಾ ಸಭೆಗಳನ್ನು ನಿಲ್ಲಿಸುವಂತೆ ಆದೇಶಿಸಿ ಕಳೆದ ವಾರ ನೀಡಲಾದ ಆದೇಶವೊಂದನ್ನು ಉಲ್ಲಂಘಿಸಿದ ಆರೋಪದಲ್ಲಿ ನಾಲ್ಕು ಸುದ್ದಿ ಸಂಸ್ಥೆಗಳನ್ನು ಮುಚ್ಚುವುದಾಗಿ ಪೊಲೀಸರು ಬೆದರಿಸಿದ್ದಾರೆ.

ಪ್ರಧಾನಿ ಪ್ರಯೂತ್ ಚಾನ್ ಒಚ ರಾಜೀನಾಮೆ ನೀಡಬೇಕು ಹಾಗೂ ರಾಜಪ್ರಭುತ್ವದ ಅಧಿಕಾರಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಪ್ರಜಾಪ್ರಭುತ್ವ ಪರ ಧರಣಿನಿರತರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ಪರ ಚಳವಳಿಯ ನೇತೃತ್ವವನ್ನು ವಿದ್ಯಾರ್ಥಿಗಳು ವಹಿಸಿಕೊಂಡಿದ್ದಾರೆ.

ಮಾಜಿ ಸೇನಾ ಮುಖ್ಯಸ್ಥ ಪ್ರಯೂತ್ ಚಾನ್ ಒಚ 2014ರಲ್ಲಿ ಕ್ಷಿಪ್ರಕ್ರಾಂತಿ ನಡೆಸಿ ಥಾಯ್ಲೆಂಡ್‌ನ ಅಧಿಕಾರವನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News