ಮೂರು ತಿಂಗಳ ಬಳಿಕ 50 ಸಾವಿರಕ್ಕಿಂತ ಕೆಳಗಿಳಿದ ದೈನಂದಿನ ಕೋವಿಡ್ ಪ್ರಕರಣ

Update: 2020-10-20 06:32 GMT

ಹೊಸದಿಲ್ಲಿ: ದೇಶದಲ್ಲಿ ಮೂರು ತಿಂಗಳ ಬಳಿಕ ದೈನಂದಿನ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 50,000ಕ್ಕಿಂತ ಕಡಿಮೆಯಾಗಿದ್ದು, ಒಟ್ಟು ಪ್ರಕರಣಗಳು 76 ಲಕ್ಷ ಸನಿಹ ತಲುಪಿದೆ.

 ಕಳೆದ 24 ಗಂಟೆಗಳ ಅವಧಿಯಲ್ಲಿ 46,790 ಹೊಸ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 75,97, 063 ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಬೆಳಗ್ಗೆ ಬಿಡುಗಡೆ ಮಾಡಿರುವ ಅಂಕಿ-ಅಂಶದಲ್ಲಿ ತಿಳಿಸಿದೆ.

ಜುಲೈ 23 ರಂದು 24 ಗಂಟೆಗಳಲ್ಲಿ ಕಡಿಮೆ ಕೋವಿಡ್ ಪ್ರಕರಣಗಳು(45,720)ದಾಖಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News