ಈಗ ಜಗತ್ತಿನ ಅತಿ ವೇಗದ ಕಾರು: ಗಂಟೆಗೆ 532.93 ಕಿ.ಮೀ. ಗರಿಷ್ಠ ವೇಗ ದಾಖಲು

Update: 2020-10-20 17:27 GMT

ನ್ಯೂಯಾರ್ಕ್, ಅ. 20: ‘ಎಸ್‌ಎಸ್‌ಸಿ ಟ್ವಾಟರ’ ಈಗ ಅಧಿಕೃತವಾಗಿ ಜಗತ್ತಿನ ಅತಿ ವೇಗದ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಅದು ಗಂಟೆಗೆ 532.93 ಕಿ.ಮೀ. ಗರಿಷ್ಠ ವೇಗವನ್ನು ದಾಖಲಿಸಿದೆ.

 ಅಮೆರಿಕದ ಎಸ್‌ಎಸ್‌ಸಿ ನಾರ್ತ್ ಅಮೆರಿಕವು ಅಭಿವೃದ್ಧಿಪಡಿಸಿರುವ ಹೈಪರ್‌ಕಾರ್ ಎರಡು ಪ್ರಾತ್ಯಕ್ಷಿಕೆಗಳಲ್ಲಿ ಸರಾಸರಿ ಗಂಟೆಗೆ 508.73 ಕಿ.ಮೀ. ವೇಗದಲ್ಲಿ ಓಡಿದೆ.

ಮುಚ್ಚಿದ ಸಾರ್ವಜನಿಕ ರಸ್ತೆಗಳ ಒಂದು ನಿರ್ದಿಷ್ಟ ಭಾಗದಲ್ಲಿ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗಿದೆ.

ಈ ಕಾರು ಈ ಹಿಂದಿನ ಕೋಯನಿಗ್‌ಸೆಗ್ ಅಜೇರ ಎಂಬ ಕಾರಿನ ದಾಖಲೆಯನ್ನು ಮುರಿದಿದೆ. ಕೋಯನಿಗ್‌ಸೆಗ್ ಅಜೇರ ಕಾರು 2017ರಲ್ಲಿ ಸರಾಸರಿ ಗಂಟೆಗೆ 447.23 ಕಿ.ಮೀ. ವೇಗದಲ್ಲಿ ಓಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News