ನೀಟ್: ಅನುತ್ತೀರ್ಣಗೊಂಡ ವಿದ್ಯಾರ್ಥಿ ಫಲಿತಾಂಶ ಮರುಪರಿಶೀಲನೆ ಬಳಿಕ ಎಸ್‍ಟಿ ವಿಭಾಗದಲ್ಲಿ ದೇಶಕ್ಕೆ ಟಾಪರ್

Update: 2020-10-21 06:41 GMT
ಮೃದುಲ್ ರಾವತ್

ಹೊಸದಿಲ್ಲಿ: ಇತ್ತೀಚೆಗೆ ಪ್ರಕಟಗೊಂಡ ನೀಟ್-2020 ಫಲಿತಾಂಶದಂತೆ ರಾಷ್ಟ್ರೀಯ ಟೆಸ್ಟಿಂಗ್ ಏಜನ್ಸಿ ನೀಡಿದ್ದ ಆರಂಭಿಕ ಅಂಕಪಟ್ಟಿಯಲ್ಲಿ ಅನುತ್ತೀರ್ಣರೆಂದು ಘೋಷಿತರಾಗಿದ್ದ ಮೃದುಲ್ ರಾವತ್ ಎಂಬ ವಿದ್ಯಾರ್ಥಿ, ಫಲಿತಾಂಶ ಮರುಪರಿಶೀಲನೆಯ ಬಳಿಕ ಪರಿಶಿಷ್ಟ ಪಂಗಡ (ಎಸ್‍ಟಿ) ವಿಭಾಗದಲ್ಲಿ ಆಲ್ ಇಂಡಿಯಾ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

''ಫಲಿತಾಂಶ ಹೊರಬಿದ್ದ ನಂತರ ನನ್ನ ಅಂಕಗಳನ್ನು ಗಮನಿಸಿದಾಗ ಆ ಅಂಕಗಳೊಂದಿಗೆ ನನಗೆ ಯಾವುದೇ ವೈದ್ಯಕೀಯ ಕಾಲೇಜಿನಲ್ಲಿ ಸೀಟು ದೊರೆಯುವುದಿಲ್ಲವೆಂದು ಬೇಸರಗೊಂಡು ಅತ್ತಿದ್ದೆ ಹಾಗೂ ಖಿನ್ನತೆಗೊಳಗಾಗಿದ್ದೆ. ನನಗೆ ಕನಿಷ್ಠ 650 ಅಂಕಗಳು ದೊರೆಯುವ ವಿಶ್ವಾಸವಿತ್ತು,'' ಎಂದು ಹೇಳುವ ಮೃದುಲ್, ಮರುಪರಿಶೀಲನೆಗೆ ಅಪೀಲನ್ನು ಟ್ವೀಟ್ ಮೂಲಕ ಸಲ್ಲಿಸಿದ್ದು ಅವರ ಓಎಂಆರ್ ಶೀಟ್ ಮತ್ತು ಆನ್ಸರ್ ಕೀ ಮರುಪರಿಶೀಲನೆಯ ನಂತರ ಅವರು ಅಖಿಲ ಭಾರತ ಮಟ್ಟದಲ್ಲಿ ಎಸ್‍ಟಿ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಮರುಪರಿಶೀಲನೆಯ ನಂತರ ಅವರ ನಿರೀಕ್ಷೆಯಂತೆ ಅವರಿಗೆ 650 ಅಂಕಗಳು ದೊರಕಿವೆ ಹಾಗೂ ನೀಟ್ ಕೂಡ ತನ್ನಿಂದಾದ ತಪ್ಪನ್ನು ಒಪ್ಪಿಕೊಂಡಿದೆ.

ನನ್ನ ಸಾಮಾನ್ಯ ವಿಭಾಗದ ಆಲ್ ಇಂಡಿಯಾ ರ್ಯಾಂಕ್ ಈಗ 3577 ಆಗಿದೆ ಎಂದು ಮೃದುಲ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News