ಜಮ್ಮು-ಕಾಶ್ಮೀರ ಪಂಚಾಯತ್‌ರಾಜ್ ಕಾಯ್ದೆ ಅಳವಡಿಕೆಗೆ ಕೇಂದ್ರ ಸಂಪುಟ ಸಮ್ಮತಿ

Update: 2020-10-21 16:39 GMT

ಹೊಸದಿಲ್ಲಿ, ಅ.21: ಜಮ್ಮು-ಕಾಶ್ಮೀರ ಪಂಚಾಯತ್‌ರಾಜ್ ಕಾಯ್ದೆ, 1989ರ ಅಳವಡಿಕೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ ಎಂದು ಸರಕಾರದ ವಕ್ತಾರರು ಹೇಳಿದ್ದಾರೆ.

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ಧಿಗೋಷ್ಠಿಯಲ್ಲಿ ವಿವರ ನೀಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಇದರಿಂದ ದೇಶದ ಇತರೆಡೆ ಇರುವಂತೆ ಜಮ್ಮು ಕಾಶ್ಮೀರದಲ್ಲೂ ಮೂರು ಹಂತದ ತಳಮಟ್ಟದ ಪ್ರಜಾಪ್ರಭುತ್ವ ಪ್ರಕ್ರಿಯೆ ಸ್ಥಾಪಿಸಲು ಅನುಕೂಲವಾಗಲಿದೆ ಎಂದರು. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳ್ಳುವ ಮೊದಲಿನ ಸಂದರ್ಭದಲ್ಲಿ ಇಂತಹ ಆಡಳಿತ ವ್ಯವಸ್ಥೆಗೆ ಅಲ್ಲಿ ಅವಕಾಶವಿರಲಿಲ್ಲ. ಇದರಿಂದ ಜಮ್ಮು ಕಾಶ್ಮೀರದ ಜನತೆಗೆ ಗ್ರಾಮ, ವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ನಾಯಕರನ್ನು ಆಯ್ಕೆ ಮಾಡಲು ಅವಕಾಶ ದೊರಕಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News