ಟ್ವೀಟಿಸಿದ್ದಕ್ಕೆ 2 ತಿಂಗಳ ಹಿಂದೆ ಬಂಧನ: ಪತ್ರಕರ್ತ ಪ್ರಶಾಂತ್ ಕನೋಜಿಯಾಗೆ ಜಾಮೀನು

Update: 2020-10-21 17:40 GMT

ಲಕ್ನೋ, ಅ. 21: ಟ್ವೀಟ್ ಒಂದಕ್ಕೆ ಸಂಬಂಧಿಸಿ ಆಗಸ್ಟ್ 18ರಂದು ಉತ್ತರಪ್ರದೇಶ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಫ್ರೀಲ್ಯಾನ್ಸ್ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರಿಗೆ ಅಲಹಾಬಾದ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಲಯ ಪ್ರಶಾಂತ್ ಕನೋಜಿಯಾ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮೊದಲ ಬಾರಿ ಸೆಪ್ಟಂಬರ್‌ನಲ್ಲಿ ನಡೆಸಿತ್ತು. ಈ ಸಂದರ್ಭ ಜಾಮೀನು ಅರ್ಜಿ ಕುರಿತು ಪ್ರತಿಕ್ರಿಯೆ ನೀಡಲು ನಾಲ್ಕು ವಾರಗಳ ಕಾಲಾವಕಾಶ ಬೇಕು ಎಂದು ರಾಜ್ಯ ಸರಕಾರ ಕೋರಿತ್ತು. ಇದಕ್ಕೆ ನ್ಯಾಯಾಲಯ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪ್ರಶಾಂತ್ ಕನೋಜಿಯಾ ಅವರು ಒಂದು ತಿಂಗಳ ಹೆಚ್ಚುವರಿಯಾಗಿ ಕಾರಾಗೃಹದಲ್ಲಿ ಇರಬೇಕಾಯಿತು. ಈ ಹಿಂದೆ ಲಕ್ನೋ ಸತ್ರ ನ್ಯಾಯಾಲಯ ಪ್ರಶಾಂತ್ ಕನೋಜಿಯಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅನಂತರ ಪ್ರಶಾಂತ್ ಕನೋಜಿಯಾ ಅವರು ಸೆಪ್ಟಂಬರ್ 8ರಂದು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News