ಥಾಯ್ಲೆಂಡ್: ತುರ್ತು ಪರಿಸ್ಥಿತಿ ಹಿಂದಕ್ಕೆ ಪಡೆದುಕೊಂಡ ಸರಕಾರ

Update: 2020-10-22 17:57 GMT

ಬ್ಯಾಂಕಾಕ್ (ಥಾಯ್ಲೆಂಡ್), ಅ. 22: ಕಳೆದ ವಾರ ವಿಧಿಸಲಾಗಿದ್ದ ‘ತೀವ್ರ ತುರ್ತು ಪರಿಸ್ಥಿತಿ’ಯನ್ನು ಥಾಯ್ಲೆಂಡ್ ಗುರುವಾರ ಹಿಂದಕ್ಕೆ ಪಡೆದುಕೊಂಡಿದೆ. ತಿಂಗಳುಗಳಿಂದ ನಡೆಯುತ್ತಿರುವ ಸರಕಾರ ವಿರೋಧಿ ಮತ್ತು ರಾಜಪ್ರಭುತ್ವ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕುವುದಕ್ಕಾಗಿ ತುರ್ತುಪರಿಸ್ಥಿತಿಯನ್ನು ಹೇರಲಾಗಿತ್ತು.

ಆದರೆ, ತುರ್ತು ಪರಿಸ್ಥಿತಿಯು ಪ್ರತಿಭಟನೆಗಳನ್ನು ಕೊನೆಗೊಳಿಸುವ ಬದಲು, ಜನರ ಆಕ್ರೋಶವನ್ನು ಹೆಚ್ಚಿಸಿದೆ ಹಾಗೂ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

‘‘ಐದು ಅಥವಾ ಅದಕ್ಕಿಂತ ಹೆಚ್ಚಿನ ಜನರು ರಾಜಕೀಯ ಕಾರಣಗಳಿಗಾಗಿ ಒಟ್ಟು ಸೇರುವುದನ್ನು ಹಾಗೂ ಭದ್ರತೆಯ ಮೇಲೆ ಪರಿಣಾಮ ಬೀರುವ ಸುದ್ದಿಯನ್ನು ಪ್ರಕಟಿಸುವುದನ್ನು ನಿಷೇಧಿಸುವ ತುರ್ತು ಪರಿಸ್ಥಿತಿ ಕ್ರಮಗಳನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ’’ ಎಂದು ಅಧಿಕೃತ ರಾಯಲ್ ಗಝೆಟ್‌ನಲ್ಲಿ ಪ್ರಕಟಗೊಂಡಿರುವ ಸರಕಾರಿ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News