ಜರ್ಮನಿಯ ಜೂಲಿಯಾ ಜಾರ್ಜ್ಸ್ ಟೆನಿಸ್‌ಗೆ ವಿದಾಯ

Update: 2020-10-22 18:43 GMT

ಬರ್ಲಿನ್, ಅ.22: 2018ರಲ್ಲಿ ವಿಂಬಲ್ಡನ್ ಸೆಮಿಫೈನಲಿಸ್ಟ್ ಆಗಿರುವ ಜರ್ಮನಿಯ ಟೆನಿಸ್‌ತಾರೆ ಜೂಲಿಯಾ ಜಾರ್ಜ್ಸ್ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

 ‘‘ವಿದಾಯ ಹೇಳಲು ಸರಿಯಾದ ಸಮಯ ಬಂದಾಗ ನನಗೆ ಆ ಭಾವನೆ ಬರುತ್ತದೆ ಎಂದು ನಾನು ಯಾವಾಗಲೂ ತಿಳಿದಿದ್ದೇ. ಅಂತಹ ಸಮಯ ಇದೀಗ ಬಂದಿದೆ’’ ಎಂಬ ಹೇಳಿಕೆಯನ್ನು ವಿಶ್ವ ರ್ಯಾಂಕಿಂಗ್‌ನಲ್ಲಿ 45ನೇ ಸ್ಥಾನದಲ್ಲಿರುವ 31ರ ಹರೆಯದ ಜೂಲಿಯಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

  ‘‘ನನಗೆ ಎಲ್ಲವನ್ನೂ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನೀವು ಎಂದೆಂದಿಗೂ ನನ್ನ ಹೃದಯದಲ್ಲಿ ಇರುತ್ತೀರಿ’’ ಎಂದು ಪತ್ರದಲ್ಲಿ ಜಾರ್ಜ್ಸ್ ಬರೆದಿದ್ದಾರೆ. ಡಬ್ಲುಟಿಎ ಟೂರ್‌ನಲ್ಲಿ ಜಾರ್ಜ್ಸ್ ಒಟ್ಟು ಏಳು ಸಿಂಗಲ್ಸ್ ಮತ್ತು ಐದು ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಎರಡು ವರ್ಷಗಳ ಹಿಂದೆ ಜೀವನ ಶ್ರೇಷ್ಠ ವಿಶ್ವದ ಒಂಭತ್ತನೇ ಸ್ಥಾನ ತಲುಪಿದ್ದರು. ಈ ಋತುವಿನಲ್ಲಿ ಅವರು ವಿಂಬಲ್ಡನ್ ಸೆಮಿಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ವಿರುದ್ಧ ಸೋಲು ಅನುಭವಿಸಿದ್ದರು. ಜಾರ್ಜ್ಸ್ ಈ ತಿಂಗಳ ಆರಂಭದಲ್ಲಿ ಫ್ರೆಂಚ್ ಓಪನ್‌ನಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಿದ್ದರು. ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ್ದರು.

ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಸ್ಟೆಫಿ ಗ್ರಾಫ್ ಮತ್ತು ಕ್ಲೌಡಿಯಾ ಕೊಹ್ಡೆ-ಕಿಲ್ಷ್ ಅವರೊಂದಿಗೆ ಅಗ್ರ 15 ಶ್ರೇಯಾಂಕಗಳನ್ನು ಗಳಿಸಿದ ಜರ್ಮನಿಯ ಮೂವರು ಆಟಗಾರ್ತಿಯರಲ್ಲಿ ಜಾರ್ಜ್ಸ್ ಒಬ್ಬರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News