ಬಾಹ್ಯಾಕಾಶ ನಿಲ್ದಾಣದಿಂದಲೇ ಮತ ಚಲಾಯಿಸಿದ ಗಗನಯಾನಿ!

Update: 2020-10-23 18:28 GMT
ಪೋಟೊ ಕೃಪೆ: twitter.com/NASA

ವಾಶಿಂಗ್ಟನ್, ಅ. 23: ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಅವೆುರಿಕದ ಗಗನಯಾನಿಯೊಬ್ಬರು ಗುರುವಾರ ಭೂಮಿಯಿಂದ 408 ಕಿ.ಮೀ. ದೂರದಿಂದಲೇ ತನ್ನ ಅಧ್ಯಕ್ಷೀಯ ಚುನಾವಣೆಯ ಮತ ಚಲಾಯಿಸಿದ್ದಾರೆ.

‘‘ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಾನು ಇಂದು ಮತ ಚಲಾಯಿಸಿದೆ’’ ಎಂದು ಕೇಟ್ ರೂಬಿನ್ಸ್ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಟ್ವಿಟರ್ ಖಾತೆಯಲ್ಲಿ ಹೇಳಿದ್ದಾರೆ. ಅವರು ಕಳೆದ ವಾರ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದು, ಇನ್ನು ಆರು ತಿಂಗಳು ಅಲ್ಲೇ ಉಳಿಯಲಿದ್ದಾರೆ.

ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರವಿರುವ ಹ್ಯೂಸ್ಟನ್‌ನ ಹ್ಯಾರಿಸ್ ಕೌಂಟಿ ಗುಮಾಸ್ತರ ಕಚೇರಿಯಲ್ಲಿ ಸೃಷ್ಟಿಸಲಾದ ಇಲೆಕ್ಟ್ರಾನಿಕ್ ಮತಪತ್ರವನ್ನು ಇಮೇಲ್ ಮೂಲಕ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗಿತ್ತು. ರೂಬಿನ್ಸ್ ಇಮೇಲ್‌ನಲ್ಲಿರುವ ಮತಪತ್ರವನ್ನು ತುಂಬಿಸಿ ಗುಮಾಸ್ತರ ಕಚೇರಿಗೆ ಕಳುಹಿಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News