ಲಂಕಾ: ಅಧ್ಯಕ್ಷರ ಅಧಿಕಾರಗಳನ್ನು ಬಲಪಡಿಸಿದ ಸಂಸತ್ತು

Update: 2020-10-23 18:05 GMT

ಕೊಲಂಬೊ (ಶ್ರೀಲಂಕಾ), ಅ. 23: ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸರ ಅಧಿಕಾರಗಳನ್ನು ಇನ್ನಷ್ಟು ಹೆಚ್ಚಿಸುವ ಸಂವಿಧಾನ ತಿದ್ದುಪಡಿಗಳಿಗೆ ದೇಶದ ಸಂಸದರು ಅಂಗೀಕಾರ ನೀಡಿದ್ದಾರೆ. ಈ ತಿದ್ದುಪಡಿಗಳು, ನ್ಯಾಯಾಧೀಶರು ಮತ್ತು ಪೊಲೀಸ್ ಮುಖ್ಯಸ್ಥರು ಮುಂತಾದ ಮಹತ್ವದ ನೇಮಕಾತಿಗಳನ್ನು ಮಾಡುವ ಅಧಿಕಾರವನ್ನು ಸಂಸತ್ತಿನಿಂದ ಕಸಿದುಕೊಂಡು ಅಧ್ಯಕ್ಷರಿಗೆ ನೀಡುತ್ತವೆ.

ಎರಡು ದಿನಗಳ ಕಾವೇರಿದ ಚರ್ಚೆಯ ಬಳಿಕ, ಸಂಸತ್ತು ಗುರುವಾರ ರಾತ್ರಿ ನೂತನ ತಿದ್ದುಪಡಿಗಳಿಗೆ ಮೂರನೇ ಎರಡು ಬಹುಮತದಿಂದ ಅಂಗೀಕಾರ ನೀಡಿತು.

 ಮಾಜಿ ರಕ್ಷಣಾ ಸಚಿವರಾಗಿರುವ ಗೋತಬಯ ರಾಜಪಕ್ಸ, ದಶಕದ ಹಿಂದೆ ದೇಶದ ಸೇನಾ ಮುಖ್ಯಸ್ಥರಾಗಿದ್ದರು. ಅವರ ಅಧಿಕಾರದ ಅವಧಿಯಲ್ಲಿ ಶ್ರೀಲಂಕಾ ಸೇನೆಯು ಎಲ್‌ಟಿಟಿಇ ಬಂಡುಕೋರರನ್ನು ಸೋಲಿಸಿತ್ತು.

ಅವರು ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದ ಬಳಿಕ, ತನ್ನ ಅಧಿಕಾರಗಳನ್ನು ಒಂದೊಂದಾಗಿ ಬಲಪಡಿಸಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News