ರೋಹಿಂಗ್ಯ ನಿರಾಶ್ರಿತರಿಗೆ ಆಹಾರ ವಿತರಿಸಿದ್ದಕ್ಕೆ ಟ್ರೋಲ್‍ಗೊಳಗಾದ ದಿಲ್ಲಿ ರೆಸ್ಟೋರೆಂಟ್ ಗಳು

Update: 2020-10-24 09:22 GMT
Photo: thequint.com

ಹೊಸದಿಲ್ಲಿ: ನವರಾತ್ರಿ ಪ್ರಯುಕ್ತ ಜಸೋಲ ಪ್ರದೇಶದಲ್ಲಿ ವಾಸವಿರುವ ರೋಹಿಂಗ್ಯ ನಿರಾಶ್ರಿತರಿಗೆ ಆಹಾರ ವಿತರಿಸಿದ ರಾಜಧಾನಿಯ ಮೂರು ರೆಸ್ಟೋರೆಂಟ್ಗಳಿಗೆ ಬೆದರಿಕೆಯೊಡ್ಡಲಾಗಿದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿದೆ ಎಂದು ಈ ಮೂರು ರೆಸ್ಟಾರೆಂಟ್‍ಗಳ ಪೈಕಿ ಎರಡರ ಮಾಲಕರಾಗಿರುವ ಶಿವಮ್ ಸೆಹಗಲ್ ಹೇಳಿದ್ದಾರೆ.

'ದಿಲ್ಲಿ ರೆಸ್ಟೋರೆಂಟ್ ಮಾಲಕರು ನವರಾತ್ರಿ ಪ್ರಯುಕ್ತ ರೋಹಿಂಗ್ಯ ನಿರಾಶ್ರಿತರಿಗೆ  ಆಹಾರ ವಿತರಿಸಿದ್ದಾರೆ,' ಎಂದು ಎಎನ್‍ಐ ಟ್ವೀಟ್ ಮಾಡಿದ ಮೂರು ಗಂಟೆಗಳೊಗಾಗಿ ಸುಮಾರು 1000 ಕಮೆಂಟುಗಳು ಬಂದಿವೆ ಹಾಗೂ ಅವುಗಳಲ್ಲಿ ಹೆಚ್ಚಿನವುಗಳು ದ್ವೇಷಯುಕ್ತವಾಗಿದ್ದವು ಹಾಗೂ ರೋಹಿಂಗ್ಯ ಮುಸ್ಲಿಮರಿಗೆ ಆಹಾರ ವಿತರಿಸಿದ್ದಕ್ಕೆ ಹೋಟೆಲುಗಳನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ,'' ಎಂದು ಸೆಹಗಲ್ ಹೇಳಿದ್ದಾರೆ.

ಹಲವರು ಈ ರೆಸ್ಟಾರೆಂಟ್‍ಗಳನ್ನು ಮುಚ್ಚಬೇಕು  ಹಾಗೂ ಅವುಗಳನ್ನು ಬಹಿಷ್ಕರಿಸಬೇಕು ಎಂದೂ ಟ್ವೀಟ್ ಮಾಡಿದ್ದಾರೆ.

"ಏಕೆ ಅಕ್ರಮ ನಿರಾಶ್ರಿತರಿಗೆ ಆಹಾರ ನೀಡಿದ್ದೀರಿ ಎಂದು ಕೆಲವರು ರೆಸ್ಟೋರೆಂಟ್ ದೂರವಾಣಿಗೆ ಕರೆ ಮಾಡಿ ಪ್ರಶ್ನಿಸಿದ್ದಾರೆ. ಅವರಿಗೆ ವಿವರಿಸಿ ಹೇಳುವ ಯತ್ನ ನಡೆಸಿದೆ, ನಂತರ ನಮ್ಮ ಕುರಿತು ಝೊಮ್ಯಾಟೋದಲ್ಲಿ ನೆಗೆಟಿವ್ ರೇಟಿಂಗ್ ನೀಡಲು ಕೆಲವರು ಆರಂಭಿಸಿದ್ದರು,'' ಎಂದೂ ಸೆಹಗಲ್ ಹೇಳಿದ್ದಾರೆ.

"ಆಹಾರಕ್ಕೆ ಧರ್ಮವಿಲ್ಲ ಎಂದು ನಂಬಿದವರು ನಾವು,  ಪ್ರತಿ ದಿನ ಆಹಾರಕ್ಕಾಗಿ ಕಷ್ಟ ಪಡುವವರಿಗೆ ನಾವು ಆಹಾರ ನೀಡಿದ್ದೇವೆ, ಆದರೆ ಒಂದು ಒಳ್ಳೆಯ ಉದ್ದೇಶಿಂದ ಕೈಗೆತ್ತಿಕೊಂಡ ಕೆಲಸದಿಂದಾಗಿ ಈಗ ನಮಗೆ ಉದ್ಯಮದಲ್ಲಿ ನಷ್ಟವಾಗುತ್ತಿದೆ. ನಮ್ಮಿಂದ ಆಹಾರ ಪಡೆದ ನಿರಾಶ್ರಿತರಲ್ಲಿ ಮುಸ್ಲಿಮರು ಮಾತ್ರವಲ್ಲದೆ  ಇತರ ಧರ್ಮದವರೂ ಇದ್ದರು. ಆದರೆ ಮುಸ್ಲಿಮರಿಗೆ ಮಾತ್ರ ಆಹಾರ ನೀಡಲಾಗಿದೆ ಎಂದು ಅಂದುಕೊಂಡರೂ ಅಗತ್ಯವಿರುವವರಿಗೆ ಆಹಾರ ನೀಡುವುದರಲ್ಲಿ ತಪ್ಪೇನಿದೆ?,'' ಎಂದು ಅವರು ಪ್ರಶ್ನಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News