ಲಕ್ಷಣರಹಿತ ಕೊರೋನ ರೋಗಿಗಳಲ್ಲಿ ಪ್ರತಿಕಾಯ ಬೇಗ ನಷ್ಟ: ಅಧ್ಯಯನ

Update: 2020-10-27 17:17 GMT

ಲಂಡನ್, ಅ. 27: ಯಾವುದೇ ಗುಣಲಕ್ಷಣಗಳನ್ನು ಹೊಂದಿರದ ಕೊರೋನ ವೈರಸ್ ರೋಗಿಗಳು, ಗುಣಲಕ್ಷಣಗಳನ್ನು ತೋರಿಸುವ ರೋಗಿಗಳಿಗಿಂತ ವೇಗವಾಗಿ ತಮ್ಮ ದೇಹದಲ್ಲಿ ಉತ್ಪತ್ತಿಯಾಗಿರುವ ಕೊರೋನ ವೈರಸ್ ವಿರೋಧಿ ಪ್ರತಿಕಾಯಗಳನ್ನು ಕಳೆದುಕೊಳ್ಳುತ್ತಾರೆ ಎಂದು ಬ್ರಿಟನ್‌ನಲ್ಲಿ ನಡೆದ ಅಧ್ಯಯನವೊಂದು ತಿಳಿಸಿದೆ.

ಪ್ರತಿಕಾಯಗಳು ನಷ್ಟವಾಗುವ ವೇಗದ ದರವು 18-24 ವಯೋಗುಂಪಿನವರೊಂದಿಗೆ ತುಲನೆ ಮಾಡಿದರೆ, 75ಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಹೆಚ್ಚಾಗಿರುತ್ತದೆ ಎಂದು ಇಂಪೀರಿಯಲ್ ಕಾಲೇಜ್ ಲಂಡನ್ ಮತ್ತು ಮಾರುಕಟ್ಟೆ ಅಧ್ಯಯನ ಸಂಸ್ಥೆ ಇಪ್ಸಾಸ್ ಮೊರಿ ಜಂಟಿಯಾಗಿ ನಡೆಸಿರುವ ಅಧ್ಯಯನ ತಿಳಿಸಿದೆ.

 ಒಮ್ಮೆ ಕೊರೋನ ವೈರಸ್ ಸೋಂಕಿಗೆ ಗುರಿಯಾದ ಬಳಿಕ, ವೈರಸ್‌ಗೆ ಪ್ರತಿಕ್ರಿಯಿಸುವ ಜನರ ರೋಗನಿರೋಧಕ ಶಕ್ತಿಯು ಸಮಯ ಕಳೆದಂತೆ ಕಡಿಮೆಯಾಗುತ್ತದೆ ಎಂದು ಮಂಗಳವಾರ ಪ್ರಕಟಗೊಂಡ ಸಂಶೋಧನಾ ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News