ಐಪಿಎಲ್ ಪ್ಲೇ ಆಫ್: ನಾಲ್ಕು ಸ್ಥಾನಕ್ಕೆ ತೀವ್ರ ಪೈಪೋಟಿ

Update: 2020-10-28 12:21 GMT

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಪ್ಲೇ ಆಫ್ ರೇಸ್ ನಿಂದ ಹೊರ ನಡೆದಿದೆ. ಪ್ಲೇ ಆಫ್ ಹಂತದ ನಾಲ್ಕು ಸ್ಥಾನಗಳಿಗಾಗಿ ಏಳು ತಂಡಗಳ ನಡುವೆ ಪೈಪೋಟಿ ಶುರುವಾಗಿದೆ.

ಈ ವರ್ಷದ ಐಪಿಎಲ್ ತೀವ್ರ ಸ್ಪರ್ಧೆಯಿಂದ ಕೂಡಿದ್ದು, ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ನಂತಹ ತಂಡ ಸತತ 5 ಪಂದ್ಯಗಳಲ್ಲಿ ಜಯ ಸಾಧಿಸಿ  ಫೀನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದಿದೆ.

ಮುಂಬೈಹಾಗೂ ಬೆಂಗಳೂರು ತಂಡಗಳು ಕಳೆದ ವಾರಾಂತ್ಯದಲ್ಲಿ ಸೋತಿದ್ದವು. ಡೆಲ್ಲಿ ತಂಡ ಮಂಗಳವಾರ ಹೈದರಾಬಾದ್ ತಂಡದ ವಿರುದ್ಧ ಸೋಲುಂಡಿತ್ತು.

ಪ್ಲೇ ಆಫ್ ಸ್ಪರ್ಧೆಯಲ್ಲಿರುವ 7 ತಂಡಗಳ ಪೈಕಿ ಮೂರು ತಂಡಗಳು(ಮುಂಬೈ, ಡೆಲ್ಲಿ ಹಾಗೂ ಬೆಂಗಳೂರು)ಹೆಚ್ಚುಕಡಿಮೆ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿವೆ. ಇದೀಗ ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ಇದ್ದು, ಈ ಸ್ಥಾನಕ್ಕೆ  ಪಂಜಾಬ್ ಹಾಗೂ ಕೆಕೆಆರ್ ಪ್ರಮುಖ ಸ್ಪರ್ಧಿಗಳಾಗಿವೆ. ಹೀಗಾಗಿ ಇನ್ನುಳಿದ ಐಪಿಎಲ್ ಲೀಗ್ ಪಂದ್ಯಗಳು ಕುತೂಹಲ ಕೆರಳಿಸಿವೆ.

1.ಡೆಲ್ಲಿ ಕ್ಯಾಪಿಟಲ್ಸ್ ಗರಿಷ್ಠ 18 ಅಂಕವನ್ನು ಗಳಿಸಬಹುದು. ಕೋಲ್ಕತಾ ಹಾಗೂ ಪಂಜಾಬ್ ತಂಡಗಳಿಗೆ ತಲಾ 16 ಅಂಕ ಗಳಿಸುವ ಅವಕಾಶವಿದೆ.

2. ತಂಡವೊಂದು ಗರಿಷ್ಠ 20 ಅಂಕಗಳನ್ನುಗಳಿಸಬಹುದು.

3.ಇದೀಗ ಮುಂಬೈಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ 20 ಅಂಕ ಗಳಿಸುವ ಅವಕಾಶವಿದೆ. ಈ ಎರಡು ತಂಡಗಳಿಗೆ ಲೀಗ್ ಹಂತದ ಕೊನೆಯಲ್ಲಿ ಅಂಕಪಟ್ಟಿಯಲ್ಲಿ ನಂ.1 ಸ್ಥಾನ ಪಡೆಯುವ ಉತ್ತಮ ಅವಕಾಶವಿದೆ.

4. ಡೆಲ್ಲಿ ತಂಡ ಮಂಗಳವಾರ ಹೈದರಾಬಾದ್ ವಿರುದ್ಧ ಸೋತ ಹೊರತಾಗಿಯೂ ಮೊದಲ ಸ್ಥಾನದೊಂದಿಗೆ ಗ್ರೂಪ್ ಹಂತ ಕೊನೆಗೊಳಿಸುವ ಅವಕಾಶವನ್ನು ಈಗಲೂ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News