ಕಂಪ್ಯೂಟರೀಕೃತ ಲಾಟರಿ ಮೂಲಕ ಎಚ್-1ಬಿ ವೀಸಾ ವಿತರಣೆ ರದ್ದು: ಅಮೆರಿಕ ಪ್ರಸ್ತಾಪ

Update: 2020-10-29 16:54 GMT

 ವಾಶಿಂಗ್ಟನ್, ಅ. 29: ಅತ್ಯುನ್ನತ ಕೌಶಲ ಹೊಂದಿರುವ ವಿದೇಶಿ ಕೆಲಸಗಾರರಿಗೆ ನೀಡಲಾಗುವ ಎಚ್-1ಬಿ ಉದ್ಯೋಗ ವೀಸಾಗಳನ್ನು ಕಂಪ್ಯೂಟರೀಕೃತ ಲಾಟರಿ ಮೂಲಕ ವಿತರಿಸುವ ವ್ಯವಸ್ಥೆಯನ್ನು ರದ್ದುಪಡಿಸುವ ಪ್ರಸ್ತಾವವನ್ನು ಅವೆುರಿಕದ ಟ್ರಂಪ್ ಸರಕಾರ ಮುಂದಿಟ್ಟಿದೆ. ಅದರ ಬದಲಿಗೆ ವೇತನ ಮಟ್ಟ ಆಧಾರಿತ ಆಯ್ಕೆ ಪ್ರಕ್ರಿಯೆಯನ್ನು ಜಾರಿಗೆ ತರಲು ಅದು ಉದ್ದೇಶಿಸಿದೆ.

ನೂತನ ವ್ಯವಸ್ಥೆ ಕುರಿತ ಅಧಿಸೂಚನೆಯನ್ನು ಫೆಡರಲ್ ರಿಜಿಸ್ಟರ್‌ನಲ್ಲಿ ಶೀಘ್ರವೇ ಪ್ರಕಟಿಸಲು ಸರಕಾರ ನಿರ್ಧರಿಸಿದೆ. ಈ ಅಧಿಸೂಚನೆಗೆ, ಸಂಬಂಧಪಟ್ಟವರು 30 ದಿನಗಳಲ್ಲಿ ಪ್ರತಿಕ್ರಿಯೆ ನೀಡಬಹುದಾಗಿದೆ ಎಂದು ಆಂತರಿಕ ಭದ್ರತಾ ಇಲಾಖೆ ಬುಧವಾರ ತಿಳಿಸಿದೆ.

ಅವೆುರಿಕದ ಉದ್ಯೋಗಿಗಳ ವೇತನ ಇಳಿಕೆಯಾಗುವುದನ್ನು ತಡೆಯಲು ನೂತನ ವ್ಯವಸ್ಥೆಯು ಸಹಾಯ ಮಾಡುತ್ತದೆ ಎಂದು ಭಾವಿಸಲಾಗಿದೆ ಎಂದು ಇಲಾಖೆ ಹೇಳಿದೆ. ಕಡಿಮೆ ವೇತನದ ಎಚ್-1ಬಿ ಉದ್ಯೋಗಿಗಳು ಅಮೆರಿಕಕ್ಕೆ ಪ್ರತಿ ವರ್ಷ ಹರಿದುಬರುತ್ತಿರುವುದು ಅಮೆರಿಕದ ಉದ್ಯೋಗಿಗಳ ವೇತನ ಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.

ನೂತನ ವ್ಯವಸ್ಥೆಯು ಜಾರಿಗೆ ಬಂದರೆ, ಅಮೆರಿಕ ಪೌರತ್ವ ಮತ್ತು ವಲಸೆ ಇಲಾಖೆಯು, ಅತಿ ಹೆಚ್ಚು ವೇತನದ ಕೊಡುಗೆಯನ್ನು ಹೊಂದಿರುವ ಅತ್ಯುನ್ನತ ಕೌಶಲ ಹೊಂದಿರುವ ವಿದೇಶಿ ಕೆಲಸಗಾರರನ್ನು ಆದ್ಯತೆಯ ಮೇರೆಗೆ ಎಚ್-1ಬಿ ವೀಸಾಗಳಿಗಾಗಿ ಆಯ್ಕೆ ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News