ಯೆಮನ್‌ನತ್ತ ಹೋಗುತ್ತಿದ್ದ ಇರಾನ್ ಕ್ಷಿಪಣಿಗಳ ವಶ: ಅಮೆರಿಕ

Update: 2020-10-30 18:46 GMT

ವಾಶಿಂಗ್ಟನ್, ಅ. 30: ಯೆಮನ್‌ನತ್ತ ಹೋಗುತ್ತಿದ್ದ ಇರಾನ್ ಕ್ಷಿಪಣಿಗಳನ್ನು ವಶಪಡಿಸಿಕೊಂಡಿದ್ದೇವೆ ಹಾಗೂ ಈ ಹಿಂದೆ ವಶಪಡಿಸಿಕೊಳ್ಳಲಾಗಿದ್ದ ವೆನೆಝುವೆಲದತ್ತ ಹೋಗುತ್ತಿದ್ದ ಇರಾನ್‌ನ ತೈಲವನ್ನು ಮಾರಾಟ ಮಾಡಿದ್ದೇವೆ ಎಂದು ಅಮೆರಿಕದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

 ಇರಾನ್‌ನ ಪೆಟ್ರೋರಾಸಾಯನಿಕ ಉತ್ಪನ್ನಗಳ ಮಾರಾಟ ಮತ್ತು ಖರೀದಿಯಲ್ಲಿ ಭಾಗಿಯಾಗಿದ್ದಾರೆನ್ನಲಾದ ಒಟ್ಟು 11 ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ಅಮೆರಿಕದ ವಿದೇಶ ಮತ್ತು ಖಜಾನೆ ಇಲಾಖೆಗಳು ದಿಗ್ಬಂಧನ ಘೋಷಿಸಿದ ದಿನವೇ, ಇರಾನ್ ಕ್ಷಿಪಣಿಗಳನ್ನು ವಶಪಡಿಸಿಕೊಂಡಿರುವುದನ್ನು ಅಮೆರಿಕದ ಕಾನೂನು ಇಲಾಖೆ ಘೋಷಿಸಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಕೇವಲ 5 ದಿನಗಳು ಉಳಿದಿರುವಂತೆಯೇ, ಟ್ರಂಪ್ ಆಡಳಿತವು ಇರಾನನ್ನು ಜಗತ್ತಿನಿಂದ ಪ್ರತ್ಯೇಕಿಸುವುದಕ್ಕಾಗಿ ಹೊಸ ಹೊಸ ಆರ್ಥಿಕ ದಿಗ್ಬಂಧನಗಳನ್ನು ವಿಧಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News