ಪಂಜಾಬ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ಗೆ ದಂಡ

Update: 2020-10-31 08:54 GMT

ಅಬುಧಾಬಿ: ರಾಜಸ್ಥಾನ ರಾಯಲ್ಸ್ ವಿರುದ್ಧ ಶುಕ್ರವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಐಪಿಎಲ್‌ನ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ಗೆ ಪಂದ್ಯ ಶುಲ್ಕದಲ್ಲಿ ಶೇ.10ರಷ್ಟು ದಂಡ ವಿಧಿಸಲಾಗಿದೆ.

    ಗೇಲ್ ಶುಕ್ರವಾರ 99 ರನ್ ಗಳಿಸಿದ್ದಾಗ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು.ಸಾಮಾನ್ಯವಾಗಿ ಶಾಂತಚಿತ್ತದಿಂದ ಇರುವ ಗೇಲ್ ಔಟ್ ಆಗಿದ್ದಕ್ಕೆ ತೀವ್ರ ಬೇಸರ ಹೊರಹಾಕಿ ಬ್ಯಾಟನ್ನು ನೆಲಕ್ಕೆ ಬಡಿದರು. ಆಗ ಅವರ ಕೈಯಿಂದ ಜಾರಿದ ಬ್ಯಾಟ್ ಮಿಡ್‌ವಿಕೆಟ್‌ನತ್ತ ಹೋಗಿ ಬಿದ್ದಿತ್ತು.

99 ರನ್‌ಗೆ ಔಟಾಗಿರುವ ಗೇಲ್ ಮತ್ತೊಮ್ಮೆ ಟ್ವೆಂಟಿ-20ಯಲ್ಲಿ ಶತಕ ವಂಚಿತರಾದರು. ಟಿ-20 ಪಂದ್ಯದಲ್ಲಿ 1,000 ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದ ಗೇಲ್ ಇತಿಹಾಸ ಪುಟದಲ್ಲಿ ತನ್ನ ಹೆಸರು ಬರೆದಿದ್ದರು. 40ರ ವಯಸ್ಸಿನ ಗೇಲ್ 400ಕ್ಕೂ ಅಧಿಕ ಟಿ-20 ಪಂದ್ಯಗಳಲ್ಲಿ 13,000 ಕ್ಕೂ ಅಧಿಕ ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News