ದೇವರೇ ಮುಖ್ಯಮಂತ್ರಿ ಆದರೂ 100 ಶೇ. ಉದ್ಯೋಗ ಒದಗಿಸಲು ಅಸಾಧ್ಯ: ಗೋವಾ ಸಿಎಂ

Update: 2020-10-31 17:05 GMT

ಪಣಜಿ.ಅ.31: “ದೇವರೇ ಮುಖ್ಯಮಂತ್ರಿ ಆದರೂ 100 ಶೇ. ಸರಕಾರಿ ಕೆಲಸ ಒದಗಿಸಲು ಸಾಧ್ಯವಿಲ್ಲ” ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶನಿವಾರ ಹೇಳಿದ್ದಾರೆ.

ಗ್ರಾಮ ಪಂಚಾಯತ್ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಪರೆನ್ಸ್ ನಲ್ಲಿ ಮಾತನಾಡಿದ ಅವರು, “ಎಲ್ಲರಿಗೂ ಶೇ.100 ಸರಕಾರಿ ಕೆಲಸ ಒದಗಿಸಲು ಅಸಾಧ್ಯ. ಒಂದು ವೇಳೆ ನಾಳೆ ಬೆಳಗ್ಗೆ ದೇವರೇ ಮುಖ್ಯಮಂತ್ರಿ ಆದರೂ ಇದು ಸಾಧ್ಯವಿಲ್ಲ” ಎಂದರು.

ಸಾವಂತ್ ಅವರು ತಮ್ಮ ಸರಕಾರದ ಮಹತ್ವಾಕಾಂಕ್ಷೆಯ ‘ಸ್ವಯಂಪೂರ್ಣ ಮಿತ್ರ’ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯಲ್ಲಿ ಸರಕಾರಿ ಅಧಿಕಾರಿಗಳು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಅನುಷ್ಠಾನಗೊಳಿಸುತ್ತಿರುವ  ಸರಕಾರದ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ.

“ಅವರ(ನಿರುದ್ಯೋಗಿ) ಕುಟುಂಬಕ್ಕೆ ರೂ. 8000 ದಿಂದ 10000 ರೂ. ವರೆಗೆ ಆದಾಯ ಇರಬೇಕು. ಇಲ್ಲಿರುವ ಹೆಚ್ಚಿನ ಉದ್ಯೋಗಗಳನ್ನು ಹೊರಗಿನವರು ಬಂದು ಪಡೆದುಕೊಳ್ಳುತ್ತಿದ್ದಾರೆ. ಗ್ರಾಮೀಣ ನಿರುದ್ಯೋಗಿಗಳಿಗೆ ಸೂಕ್ತವಾದ ಸಣ್ಣ ಉದ್ಯೋಗಗಳಿಗೆ ವ್ಯವಸ್ಥೆ ಮಾಡುವಂತಹ ಈ ಕೆಲಸಗಳನ್ನು ನಮ್ಮ ಸ್ವಯಂಪೂರ್ಣ ಮಿತ್ರ’ ಮಾಡುತ್ತದೆ” ಎಂದು ಸಾವಂತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News