ಕೋವಿಡ್-19 ಆತಂಕ: ವಿದೇಶಿ ಪ್ರಯಾಣಿಕರಿಗೆ ಪಾಕ್ ಮಾರ್ಗಸೂಚಿ

Update: 2020-10-31 17:49 GMT

ಇಸ್ಲಾಮಾಬಾದ್,ಅ.31: ಜಗತ್ತಿನಾದ್ಯಂತ ಕೋವಿಡ್-19 ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ ಕಂಡುಬಂದಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವು ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಪ್ರಯಾಣಿಕರು ಕೊರೋನ ವೈರಸ್ ಸೋಂಕಿನ ತಪಾಸಣೆಗೆ ಒಳಗಾಗದೆ ಆಗಮಿಸಬಹುದಾದ ದೇಶಗಳ ಸಂಖ್ಯೆಯನ್ನು ಅದು ಈಗ 30ರಿಂದ 22ಕ್ಕೆ ಇಳಿಸಿದೆ.

ಶುಕ್ರವಾರದಂದು ಪಾಕಿಸ್ತಾನದ ನಾಗರಿಕ ವಾಯುಯಾನ ಪ್ರಾಧಿಕಾರ (ಸಿಎಎ)ವು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಎರಡು ಶ್ರೇಣಿಗಳಾಗಿ ವಿಭಜಿಸಿದೆ.

  ಎ ಶ್ರೇಣಿಯ ದೇಶಗಳ ಪ್ರಯಾಣಿಕರು ಕೋವಿಡ್-19 ವರದಿಯನ್ನು ಸಲ್ಲಿಸದೆ ಪಾಕ್ ಪ್ರವೇಶಿಸಬಹುದಾಗಿದೆ. ಆದರೆ ಬಿ ಶ್ರೇಣಿಯ ದೇಶಗಳ ಪ್ರಯಾಣಿಕರು ಪಾಕಿಸ್ತಾನದ ವಿಮಾನವನ್ನು ಏರುವುದಕ್ಕೆ 96 ತಾಸು ಮುಂಚಿತವಾಗಿ ಕೋವಿಡ್-19 ತಪಾಸಣೆಗೆ ಒಳಗಾಗಬೇಕಾಗಿದೆ.

 ಸಿಂಗಾಪುರ, ಟರ್ಕಿ, ಚೀನಾ, ನ್ಯೂಝಿಲ್ಯಾಂಡ್, ಆಸ್ಟ್ರೇಲಿಯ ಹಾಗೂ ಶ್ರೀಲಂಕಾ ದೇಶಗಳನ್ನು ಎ ಶ್ರೇಣಿಯ ದೇಶಗಳ ಪಟ್ಟಿಯಲ್ಲಿವೆ. ನವೆಂಬರ್ 6ರಿಂದ ಡಿಸೆಂಬರ್ 31ರವರೆಗೆ ಈ ಅಧಿಸೂಚನೆ ಜಾರಿಯಲ್ಲಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News