×
Ad

ಆರ್ಥಿಕ ಕುಸಿತಕ್ಕೆ ಅವಸರದ ಲಾಕ್ ಡೌನ್ ಕಾರಣ:ಸುಭಾಶ್ ಚಂದ್ರ ಗರ್ಗ್

Update: 2020-11-02 23:18 IST

ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಅವಸರದಲ್ಲಿ ದೇಶಾದ್ಯಂತ ಹೇರಲಾಗಿದ್ದ ಕಠಿಣ ಲಾಕ್ ಡೌನ್ ಭಾರತದ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಶ್ ಚಂದ್ರ ಗರ್ಗ್ ಅಭಿಪ್ರಾಯಪಟ್ಟಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರೊಂದಿಗೆ ವೈಯಕ್ತಿಕ ಸಂಘರ್ಷದ ಕಾರಣಕ್ಕೆ ತಾನು ಸ್ವಯಂ ನಿವೃತ್ತಿ ಪಡೆದುಕೊಂಡೆ ಎಂದಿರುವ ಗರ್ಗ್, "ಭಾರತವು ಯಾವುದೇ ಸಮಯದಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಸಾಮರ್ಥ್ಯದ ಕುರಿತು ಸಾಕಷ್ಟು ಸಿನಿಕತನವಿದೆ. ಭಾರತದಲ್ಲಿ ಶೇ.1ಕ್ಕಿಂತ ಹೆಚ್ಚು ವೈರಸ್ ಇಲ್ಲದಿರುವ ಸಮಯದಲ್ಲಿ ಇಡೀ ದೇಶದಲ್ಲಿ ವಿಶ್ವದ ಅತ್ಯಂತ ಕಠಿಣ ಲಾಕ್ ಡೌನ್ ಹೇರುವ ಮೂಲಕ ಸರಕಾರ ತನ್ನ ಗುರಿ ಈಡೇರಿಸಿಕೊಂಡಿದೆ. ಈ ಮೂಲಕ  ಆರ್ಥಿಕ ಬೆಳವಣಿಗೆಯ ಕಣ್ಣು ಗುಡ್ಡೆಯನ್ನು ಕಿತ್ತುಹಾಕಿದೆ'' ಎಂದು ಇತ್ತೀಚೆಗಿನ ತಮ್ಮ ಬ್ಲಾಗ್ ನಲ್ಲಿ  ಬರೆದಿದ್ದಾರೆ.

"ಜೂನ್ 25ಕ್ಕೆ ಕೊನೆಗೊಂಡ ಮೂರು ತಿಂಗಳ ಭಾರತದ ಆರ್ಥಿಕತೆಯು ದಾಖಲೆ 23.9 ಶೇ.ರಷ್ಟು ಕುಗ್ಗಿತ್ತು. ಮುಖ್ಯವಾಗಿ ಮಾರ್ಚ್ 25 ರಂದು ಜಾರಿಗೆ ಬಂದ 68 ದಿನಗಳ ಕಠಿಣ ಲಾಕ್ ಡೌನ್ ಕಾರ್ಖಾನೆಗಳು ಹಾಗೂ ವ್ಯಾಪಾರ ಸಂಸ್ಥೆಗಳನ್ನು ಸ್ಥಗಿತಗೊಳಿಸಿತು. ಸಾರ್ವಜನಿಕ ಸಾರಿಗೆಯನ್ನು ಮುಚ್ಚಿಸಿತು ಹಾಗೂ ಲಕ್ಷಾಂತರ ಕಾರ್ಮಿಕರ ವಲಸೆಗೆ ಕಾರಣವಾಯಿತು. ನಗರಗಳಿಂದ ಮರಳಿ ಗ್ರಾಮದಲ್ಲಿರುವ ತಮ್ಮ ಮನೆಗಳಿಗೆ ಹಾಗೂ ನಾಗರಿಕರನ್ನುಮನೆಯೊಳಗೆ ಸೀಮಿತಗೊಳಿಸಲಾಯಿತು'' ಎಂದು ಗರ್ಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News