×
Ad

ಬಾಲಿವುಡ್ ನಟ ಫರಾಝ್ ಖಾನ್ ನಿಧನ

Update: 2020-11-04 23:58 IST

ಮುಂಬೈ, ನ. 4: 1990ರಲ್ಲಿ ‘ಫರೇಬ್’ ಹಾಗೂ ‘ಮೆಹಂದಿ’ಯಂತಹ ಚಿತ್ರಗಳಲ್ಲಿ ನಟಿಸಿದ್ದ ಬಾಲಿವುಡ್ ನಟ ಫರಾಝ್ ಖಾನ್ (50) ಅಲ್ಪ ಕಾಲ ಅಸೌಖ್ಯದ ಬಳಿಕ ಬುಧವಾರ ನಿಧನರಾದರು.

ಮೆದುಳಿನ ಸೋಂಕಿನಿಂದ ಫರಾಝ್ ಖಾನ್ ಬಳಲುತ್ತಿದ್ದಾರೆ ಎಂದು ಈ ಹಿಂದೆ ಸುದ್ದಿ ಹಂಚಿಕೊಂಡಿದ್ದ ನಟಿ ಹಾಗೂ ನಿರ್ದೇಶಕಿ ಪೂಜಾ ಭಟ್ ಈ ಸುದ್ದಿಯನ್ನು ಕೂಡ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಸೋಂಕಿನ ಹಿನ್ನೆಲೆಯಲ್ಲಿ ಫರಾಝ್ ಖಾನ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಈ ಸೋಂಕು ಎದೆಯಿಂದ ಮೆದುಳಿಗೆ ಹರಡಿತ್ತು. ಅನಂತರ ಅವರನ್ನು ಐಸಿಯುನಲ್ಲಿ ದಾಖಲಿಸಲಾಗಿತ್ತು.

ಫರಾಝ್ ಖಾನ್ ಅವರು ದುಲ್ಹನ್ ಬಾನೋ ಮೈನ್ ತೇರಿ (1999), ಚಾಂದ್ ಬುಝ್ ಗಯಾ (2005) ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News