3 ಕೋಟಿ ಕೊರೋನ ಲಸಿಕೆಗಾಗಿ ಭಾರತ ಜೊತೆ ಬಾಂಗ್ಲಾ ಒಪ್ಪಂದ

Update: 2020-11-05 17:22 GMT

ಢಾಕಾ (ಬಾಂಗ್ಲಾದೇಶ), ನ. 5: ಬ್ರಿಟಿಶ್ ಔಷಧ ತಯಾರಿಕಾ ಕಂಪೆನಿ ಆ್ಯಸ್ಟ್ರಝೆನೆಕ ಅಭಿವೃದ್ಧಿಪಡಿಸುತ್ತಿರುವ ಸಂಭಾವ್ಯ ಕೊರೋನ ವೈರಸ್ ಲಸಿಕೆಯ ಮೂರು ಕೋಟಿ ಡೋಸ್‌ಗಳ ಖರೀದಿಗಾಗಿ ಬಾಂಗ್ಲಾದೇಶವು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯದೊಂದಿಗೆ ಗುರುವಾರ ಒಪ್ಪಂದ ಮಾಡಿಕೊಂಡಿದೆ.

ಆಸ್ಟ್ರಝೆನೆಕದ ಪ್ರಯೋಗ ಹಂತದಲ್ಲಿರುವ ಕೋವಿಡ್-19 ಲಸಿಕೆಯು ಭರವಸೆ ಹುಟ್ಟಿಸಿದೆ.

‘‘ಲಸಿಕೆ ತಯಾರಾದಾಗ, ಸೀರಮ್ ಇನ್‌ಸ್ಟಿಟ್ಯೂಟ್ ನಮಗೆ ಮೊದಲ ಹಂತದಲ್ಲಿ 3 ಕೋಟಿ ಡೋಸ್ ಲಸಿಕೆಗಳನ್ನು ನೀಡುತ್ತದೆ’’ ಎಂದು ಬಾಂಗ್ಲಾದೇಶದ ಆರೋಗ್ಯ ಸಚಿವ ಝಾಹಿದ್ ಮಾಲೀಕಿ ಹೇಳಿದರು. ಢಾಕಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

 ಬಾಂಗ್ಲಾದೇಶದ ಔಷಧ ತಯಾರಿಕಾ ಸಂಸ್ಥೆ ಬೆಕ್ಸಿಮೊ ಫಾರ್ಮಾಸ್ಯೂಟಿಕಲ್ಸ್ ಮೂಲಕ ತಿಂಗಳಿಗೆ ಲಸಿಕೆಯ 50 ಲಕ್ಷ ಡೋಸ್‌ಗಳನ್ನು ಖರೀದಿಸಲಾಗುವುದು ಎಂದು ಅವರು ಹೇಳಿದರು.

‘‘ಪ್ರತಿಯೋರ್ವ ಸೋಂಕಿತ ವ್ಯಕ್ತಿಗೆ 28 ದಿನಗಳ ಅಂತರದಲ್ಲಿ ಲಸಿಕೆಯ ಎರಡು ಡೋಸ್‌ಗಳ ಅಗತ್ಯವಿದ್ದು, 1.5 ಕೋಟಿ ಜನರಿಗೆ ಲಸಿಕೆ ನೀಡಲು ನಮಗೆ ಸಾಧ್ಯವಾಗುತ್ತದೆ’’ ಎಂದು ಮಾಲೀಕಿ ನುಡಿದರು.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News