ಬ್ರಿಟನ್‌ನಿಂದ ಮಲ್ಯ, ನೀರವ್ ಮೋದಿ ಹಸ್ತಾಂತರ ಕೋರಿದ ಭಾರತ

Update: 2020-11-05 18:17 GMT

ಹೊಸದಿಲ್ಲಿ, ನ. 5: ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗಾಲ ಹಾಗೂ ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ನಡುವೆ ಲಂಡನ್‌ನಲ್ಲಿ ನಡೆದ ಮಾತುಕತೆಯ ಸಂದರ್ಭ ಬ್ರಿಟನ್‌ನಿಂದ ಹಸ್ತಾಂತರಕ್ಕೆ ಸಂಬಂಧಿಸಿದ ಎಲ್ಲ ಕಾನೂನು ಪ್ರಕ್ರಿಯಗಳನ್ನು ಪೂರ್ಣಗೊಳಿಸಿದ ಮದ್ಯದ ದೊರೆ ವಿಜಯ್ ಮಲ್ಯನ ತ್ವರಿತ ಹಸ್ತಾಂತರಕ್ಕೆ ಭಾರತದ ಆಸಕ್ತಿಯನ್ನು ಒತ್ತಿ ಹೇಳಲಾಗಿದೆ.

ಮೂರು ದೇಶಗಳ ಯುರೋಪ್ ಪ್ರವಾಸ ಸಂದರ್ಭ ಶೃಂಗಾಲ ಲಂಡನ್‌ನಲ್ಲಿ ಬ್ರಿಟನ್‌ನ ಹಲವು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಪ್ರೀತಿ ಪಟೇಲ್ ಹಾಗೂ ಬ್ರಿಟನ್ ವಿದೇಶಾಂಗ ಕಚೇರಿಯ ದಕ್ಷಿಣ ಏಶ್ಯಾಕ್ಕಿರುವ ಕಾರ್ಯದರ್ಶಿ ಲಾರ್ಡ್ ತಾರೀಕ್ ಅಹ್ಮದ್ ಅವರೊಂದಿಗೆ ಆರ್ಥಿಕ ಅಪರಾಧಿಗಳು ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಎದುರಿಸುವ ಕುರಿತು ಅವರು ಚರ್ಚೆ ನಡೆಸಿದ್ದಾರೆ. ಬ್ರಿಟನ್‌ನಲ್ಲಿ ಎಲ್ಲ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಆರ್ಥಿಕ ಅಪರಾಧಿ ವಿಜಯ್ ಮಲ್ಯನ ತ್ವರಿತ ಹಸ್ತಾಂತರವನ್ನು ಆದಷ್ಟು ಬೇಗ ನೋಡಬೇಕೆಂಬ ಇಚ್ಚೆಯನ್ನು ನಾವು ವ್ಯಕ್ತಪಡಿಸಿದ್ದೇವೆ.

ಆದಷ್ಟು ಬೇಗ ಆತ ಭಾರತಕ್ಕೆ ಹಿಂದಿರುಗಿಸಬೇಕು ಎಂದು ನಾವು ಬಯಸುತ್ತೇವೆ ಎಂದು ಶೃಂಗಾಲ ಹೇಳಿದ್ದಾರೆ. ನೀರವ್ ಮೋದಿ ಹಸ್ತಾಂತರದ ಬಗ್ಗೆ ಕೂಡ ಲಾರ್ಡ್ ಅಹ್ಮದ್ ಹಾಗೂ ಗೃಹ ಕಾರ್ಯದರ್ಶಿ ಅವರಲ್ಲಿ ತಿಳಿಸಿದ್ದೇನೆ. ಇಬ್ಬರು ನಮ್ಮ ಆದ್ಯತೆ ಹಾಗೂ ಅದಕ್ಕೆ ಸಂಬಂಧಿಸಿದ ಭಾವನೆಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದರು ಎಂದು ಶೃಂಗಾಲ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News