ಮುಸ್ಲಿಂ ರಾಷ್ಟ್ರಗಳ ಪ್ರಜೆಗಳ ಮೇಲಿನ ಪ್ರವೇಶ ನಿಷೇಧವನ್ನು ರದ್ದುಗೊಳಿಸಲಿರುವ ಬೈಡನ್: ವರದಿ

Update: 2020-11-08 16:59 GMT

ವಾಶಿಂಗ್ಟನ್,ನ.8: ಭಾರತದ 5 ಲಕ್ಷ ಮಂದಿ ಸೇರಿದಂತೆ ಅಮೆರಿಕದಲ್ಲಿ ನೆಲೆಸಿರುವ 1.10 ಕೋಟಿಗೂ ಅಧಿಕ ದಾಖಲೆಪತ್ರ ರಹಿತ ವಲಸಿಗರಿಗೆ ಅಮೆರಿಕದ ಪೌರತ್ವವನ್ನು ಒದಗಿಸುವ ನಿಟ್ಟಿನಲ್ಲಿ ಮಾರ್ಗನಕ್ಷೆಯೊಂದನ್ನು ಸಿದ್ಧಪಡಿಸಲು ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಚಿಂತಿಸುತ್ತಿದ್ದಾರೆ ಹಾಗೂ ಪ್ರತಿ ವರ್ಷವೂ ಕನಿಷ್ಠ 95 ಸಾವಿರ ವಲಸಿಗರಿಗೆ ದೇಶದಲ್ಲಿ ಆಶ್ರಯ ನೀಡುವ ಕಾರ್ಯಯೋಜನೆಯನ್ನು ಕೂಡಾ ಅವರು ರೂಪಿಸಲಿದ್ದ್ಜಾರೆಂದು ಡೆಮಾಕ್ರಾಟಿಕ್ ಪಕ್ಷದ ಮೂಲಗಳು ತಿಳಿಸಿವೆ.

ಕೆಲವು ನಿರ್ದಿಷ್ಟ ಮುಸ್ಲಿಂ ರಾಷ್ಟ್ರಗಳ ಜನತೆಗೆ ಅಮೆರಿಕ ಪ್ರವೇಶಕ್ಕೆ ಇರುವ ನಿರ್ಬಂಧವನ್ನು ಬೈಡನ್ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ರದ್ದುಪಡಿಸಲಿದ್ದಾರೆಂದು ಅವು ತಿಳಿಸಿವೆ.

ಇರಾನ್, ಸಿರಿಯ ಸೇರಿದಂತೆ ಮುಸ್ಲಿಮರು ಬಹುಸಂಖ್ಯಾತರಾಗಿರುವ ಹಲವಾರು ದೇಶಗಳ ಜನರು ಅಮೆರಿಕಕ್ಕೆ ಆಗಮಿಸುವುದನ್ನು ನಿಷೇಧಿಸುವ ಟ್ರಂಪ್ ಅವರ ವಿವಾದಾತ್ಮಕ ನಿರ್ಧಾರವು ವ್ಯಾಪಕ ಖಂಡನೆಗೆ ಒಳಗಾಗಿತ್ತು.

 ಬೈಡನ್ ಆಡಳಿತವು ಕುಟುಂಬ ಆಧಾರಿತ ವಲಸೆಯನ್ನು ಬೆಂಬಲಿಸಲಿದೆ ಹಾಗೂ ಕೌಟುಂಬಿಕ ಏಕತೆಯ ಸಂರಕ್ಷಣೆಯು ಅಮೆರಿಕದ ವಲಸೆ ವ್ಯವಸ್ಥೆಯಲ್ಲಿ ಪ್ರಧಾನ ಸಿದ್ಧಾಂತವಾಗಿರುವುದು ಎಂದು ಬೈಡನ್ ಚುನಾವಣಾ ಪ್ರಚಾರ ಸಮಿತಿಯು ಬಿಡುಗಡೆಗೊಳಿಸಿರುವ ನೀತಿ ನಿರೂಪಣೆ ದಾಖಲೆಪತ್ರವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News