ಕಮಲಾ ಆಯ್ಕೆ: ಲಿಂಗ ಸಮಾನತೆ ನಿಟ್ಟಿನಲ್ಲಿ ಪ್ರಮುಖ ಮೈಲಿಗಲ್ಲು; ವಿಶ್ವಸಂಸ್ಥೆ ಹರ್ಷ

Update: 2020-11-10 17:22 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ನ. 10: ಅವೆುರಿಕದ ಮೊದಲ ಕರಿಯ ಮತ್ತು ದಕ್ಷಿಣ ಏಶ್ಯ ಮೂಲದ ಮಹಿಳಾ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗಿರುವುದನ್ನು ವಿಶ್ವಸಂಸ್ಥೆಯ ನಾಯಕತ್ವ ಸ್ವಾಗತಿಸಿದೆ. ಅವರು ಇನ್ನೊಂದು ಅಡೆತಡೆಯನ್ನು ಭೇದಿಸಿದ್ದಾರೆ ಎಂದು ಹೇಳಿರುವ ವಿಶ್ವಸಂಸ್ಥೆಯು, ಇದು ಲಿಂಗ ಸಮಾನತೆಯ ನಿಟ್ಟಿನಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ ಎಂದಿದೆ.

ಮಹಿಳಾ ಮುಂದಾಳುಗಳು ಮುಂಚೂಣಿಗೆ ಬಂದರೆ ಹಾಗೂ ಅಡೆತಡೆಗಳನ್ನು ಭೇದಿಸಿ ಮುನ್ನಡೆದರೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಯಾವಾಗಲೂ ಬೆಂಬಲಿಸುತ್ತಾರೆ ಎಂದು ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಸೋಮವಾರ ನಡೆದ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವಿಶ್ವಸಂಸ್ಥೆಯ ಮಹಾಧಿವೇಶನದ 75ನೇ ಮಹಾಸಭೆಯ ಅಧ್ಯಕ್ಷ ವೊಲ್ಕನ್ ಬೊಝ್ಕಿರ್ ಟ್ವೀಟ್ ಮಾಡಿ, ನಿಯೋಜಿತ ಅಧ್ಯಕ್ಷ ಜೋ ಬೈಡನ್ ಮತ್ತು ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ರನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News