ಅಮೆರಿಕ ರಕ್ಷಣಾ ಸಚಿವಾಲಯಕ್ಕೆ ಭಾರತೀಯ ಅಮೆರಿಕನ್ ನೇಮಕ

Update: 2020-11-11 17:31 GMT

ವಾಶಿಂಗ್ಟನ್, ನ. 11: ಅಮೆರಿಕದ ಉಸ್ತುವಾರಿ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್‌ರ ಸಿಬ್ಬಂದಿ ಮುಖ್ಯಸ್ಥರಾಗಿ ಭಾರತೀಯ ಅವೆುರಿಕನ್ ಕಾಶ್ ಪಟೇಲ್‌ರನ್ನು ನೇಮಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಪೆಂಟಗನ್ ಘೋಷಿಸಿದೆ.

ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್‌ರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಜಾಗೊಳಿಸಿದ ಒಂದು ದಿನದ ಬಳಿಕ ಈ ನೇಮಕಾತಿ ನಡೆದಿದೆ. ಮಾರ್ಕ್ ಎಸ್ಪರ್‌ರ ಸ್ಥಾನದಲ್ಲಿ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಕೇಂದ್ರದ ನಿರ್ದೇಶಕ ಕ್ರಿಸ್ ಮಿಲ್ಲರ್‌ರನ್ನು ಉಸ್ತುವಾರಿ ರಕ್ಷಣಾ ಕಾರ್ಯದರ್ಶಿಯಾಗಿ ಟ್ರಂಪ್ ನೇಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News