ಅಕ್ರಮ ಚಿನ್ನ ಸಾಗಾಟ ಆರೋಪ: ಏರ್‌ಪೋರ್ಟ್‌ನಲ್ಲಿ ಕೃನಾಲ್ ಪಾಂಡ್ಯರನ್ನು ವಶಕ್ಕೆ ಪಡೆದ ಅಧಿಕಾರಿಗಳು

Update: 2020-11-12 17:38 GMT

ಮುಂಬೈ, ನ.12: ಅಕ್ರಮ ಚಿನ್ನ ಹಾಗೂ ಇತರ ಅಮೂಲ್ಯ ವಸ್ತುಗಳನ್ನು ಸಾಗಿಸುತ್ತಿದ್ದ ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ)ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆೆ ಎಂದು ಮೂಲಗಳು ತಿಳಿಸಿವೆ.

ಕೃನಾಲ್ ಸಂಜೆ 5 ಗಂಟೆಗೆ ವಿಮಾನದಲ್ಲಿ ಯುಎಇಯಿಂದ ವಾಪಸಾದ ತಕ್ಷಣವೇ ಡಿಆರ್‌ಐ ಸಿಬ್ಬಂದಿ ಅವರನ್ನು ತಡೆದು ತಪಾಸಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಲ್‌ರೌಂಡರ್ ಕೃನಾಲ್ ಪಾಂಡ್ಯ ದುಬೈನಲ್ಲಿ ಮಂಗಳವಾರ ಕೊನೆಗೊಂಡಿರುವ ಐಪಿಎಲ್‌ನಲ್ಲಿ ಐದನೆ ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಸದಸ್ಯನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News