ಸಿಡ್ನಿ ತಲುಪಿದ ಕೊಹ್ಲಿ ನಾಯಕತ್ವದ ಭಾರತ ತಂಡ

Update: 2020-11-12 18:59 GMT

ಸಿಡ್ನಿ: ನಾಯಕ ವಿರಾಟ್ ಕೊಹ್ಲಿ ನೇತೃತ್ವದ 25 ಸದಸ್ಯರನ್ನು ಒಳಗೊಂಡ ಟೀಮ್ ಇಂಡಿಯಾವು ಎರಡು ತಿಂಗಳ ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸಕ್ಕೆ ಗುರುವಾರ ಸಿಡ್ನಿ ತಲುಪಿದೆ. ನಗರದ ಹೊರವಲಯದಲ್ಲಿ ಟೀಮ್ ಇಂಡಿಯಾವು 14 ದಿನಗಳ ಕ್ವಾರಂಟೈನ್ ಹಾಗೂ ತರಬೇತಿಯನ್ನು ಆರಂಭಿಸಲಿದೆ.

  ಆಸ್ಟ್ರೇಲಿಯದ ಸ್ಟಾರ್‌ಗಳಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಪ್ಯಾಟ್ ಕಮಿನ್ಸ್ ಜೊತೆಗೆ ಭಾರತೀಯ ತಂಡ ಮಧ್ಯಾಹ್ನ ಸಿಡ್ನಿ ಒಲಿಂಪಿಕ್ಸ್ ಪಾರ್ಕ್ ತಲುಪಿತು.

ಎರಡು ವಾರಗಳ ಕ್ವಾರಂಟೈನ್ ಅವಧಿಯಲ್ಲಿ ಅಭ್ಯಾಸವನ್ನು ನಡೆಸಲು ನ್ಯೂ ಸೌತ್ ವೇಲ್ಸ್ ಸರಕಾರವು ಭಾರತೀಯ ಕ್ರಿಕೆಟ್ ತಂಡಕ್ಕೆ ಅವಕಾಶ ನೀಡಿದೆ.ಬಯೋ-ಸೆಕ್ಯೂರ್ ಸ್ಥಳವನ್ನಾಗಿ ಪರಿವರ್ತಿಸಲಾಗಿರುವ ಬ್ಲಾಕ್‌ಟೌನ್ ಇಂಟರ್‌ನ್ಯಾಶನಲ್ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ತರಬೇತಿ ನಡೆಯಲಿದೆ.

ನಾಯಕ ಕೊಹ್ಲಿ ಅಡಿಲೇಡ್‌ನಲ್ಲಿ ಡಿ.17ರಿಂದ 21ರ ತನಕ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯ ಕೊನೆಗೊಂಡ ಬಳಿಕ ಸ್ವದೇಶಕ್ಕೆ ವಾಪಸಾಗಲಿದ್ದಾರೆ. ಅವರು ಕ್ವಾರಂಟೈನ್ ಅವಧಿಯಲ್ಲಿ ವಿಶೇಷ ಆರೈಕೆ ಪಡೆಯಲು ಸಜ್ಜಾಗಿದ್ದಾರೆ ಎಂದು ‘ಡೈಲಿ ಟೆಲಿಗ್ರಾಫ್’ ವರದಿ ಮಾಡಿದೆ.

ಟೆಲಿಗ್ರಾಫ್ ಪ್ರಕಾರ ಆಸ್ಟ್ರೇಲಿಯದ ರಗ್ಬಿ ದಂತಕತೆ ಬ್ರಾಡ್ ಫಿಟ್ಲರ್ ಸಾಮಾನ್ಯವಾಗಿ ಧರಿಸುವ ವಿಶೇಷ ಪೆಂಟ್‌ಹೌಸ್ ಸೂಟ್ ಅನ್ನು ಹೊಟೇಲ್ ಅಧಿಕಾರಿಗಳು ಭಾರತೀಯ ನಾಯಕನಿಗೆ ಒದಗಿಸಲಿದ್ದಾರೆ.

ಐಪಿಎಲ್‌ನಲ್ಲಿ ಭಾಗವಹಿಸಿ ಯುಎಇಯಿಂದ ವಾಪಸಾಗಿರುವ ಆಸ್ಟ್ರೇಲಿಯ ಸ್ಟಾರ್ ಆಟಗಾರರು ನವೆಂಬರ್ 22 ರಂದು ತಮ್ಮ ರಾಷ್ಟ್ರೀಯ ಶಿಬಿರವನ್ನು ಸೇರ್ಪಡೆಯಾಗಲಿದ್ದಾರೆ.

 ಸೀಮಿತ ಓವರ್ ಕ್ರಿಕೆಟ್ ಸರಣಿಯು ನವೆಂಬರ್ 27ರಿಂದ ಆರಂಭ ವಾಗಲಿದ್ದು,ಎರಡು ನಗರಗಳಾದ ಸಿಡ್ನಿ ಹಾಗೂ ಕ್ಯಾನ್‌ಬೆರಾದಲ್ಲಿ ಸರಣಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News