''ಬಡ ವಿದ್ಯಾರ್ಥಿಗಳ ಸೇವೆಗೆ ಸಂದ ರಾಜ್ಯೋತ್ಸವ ಪ್ರಶಸ್ತಿ''

Update: 2020-11-13 13:58 GMT

ಬೆಂಗಳೂರು, ನ.13: ಕೋವಿಡ್-19 ಲಾಕ್‍ಡೌನ್ ಮತ್ತು ಅನಂತರ ಸಂದರ್ಭದಲ್ಲಿ ಬಡ ಕೂಲಿ ಕಾರ್ಮಿಕರು ಮತ್ತು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ `ರಾಜ್ಯೋತ್ಸವ ಪ್ರಶಸ್ತಿ' ಸಂದಿರುವುದು ನಿಜಕ್ಕೂ ಹೆಮ್ಮೆ ತಂದಿದೆ. ಅಲ್ಲದೆ, ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು 'ಯೂತ್ ಫಾರ್ ಸೇವಾ' ಸಂಸ್ಥಾಪಕ ವೆಂಕಟೇಶ ಮೂರ್ತಿ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಿಕ್ಷಣ, ಆರೋಗ್ಯ, ಜೀವನೋಪಾಯ ಮತ್ತು ಪರಿಸರ ಕ್ಷೇತ್ರಗಳಲ್ಲಿನ ವಿವಿಧ ತಳಹದಿ ಯೋಜನೆಗಳಿಗೆ ಯುವಕರನ್ನು ಸಂಪರ್ಕಿಸುವ ವೇದಿಕಯಾಗಿ ಯೂತ್ ಫಾರ್ ಸೇವಾ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದನ್ನು 2007ರಲ್ಲಿ ಸ್ಥಾಪಿಸಲಾಯಿತು ಮತ್ತು ಸಮುದಾಯಕ್ಕೆ ಸೇವೆ ಸಲ್ಲಿಸಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತದೆ ಎಂದು ತಿಳಿಸಿದ್ದಾರೆ.

ಕೋವಿಡ್-19 ಸಮಯದಲ್ಲಿ 6,45,760 ಜನರಿಗೆ ಸೇವೆ ಸಲ್ಲಿಸಿದ್ದೇವೆ. 59,551 ದಿನಸಿ ಕಿಟ್‍ಗಳು, 1.40ಲಕ್ಷಕ್ಕೂ ಅಧಿಕ ಆಹಾರದ ಪ್ಯಾಕೆಟ್‍ಗಳನ್ನು ಒದಗಿಸಿದ್ದೇವೆ ಮತ್ತು ಸುಮಾರು 4,675 ತಿನಿಸುಗಳನ್ನು ವಿತರಿಸಿದ್ದೇವೆ ಮತ್ತು 1,46,497 ಮಾಸ್ಕ್‍ಗಳನ್ನು ಜನರಿಗೆ ವಿತರಿಸಿದ್ದೇವೆ. ಯೂತ್ ಫಾರ್ ಸೇವಾ ಪರಿಸರ ಕ್ಷೇತ್ರದಲ್ಲಿ ಪೇಪರ್ ಬ್ಯಾಕ್ ನಿಡಿ ಅದು ನೋಟು ಬುಕ್‍ನ ಬಳಕೆಯಾಗದ ಹಾಳೆಗಳನ್ನು ಮರುಬಳಕೆ ಮಾಡುವ ಉದ್ದೇಶದಿಂದ ಹೊಸ ನೋಟ್‍ಬುಕ್‍ಗಳನ್ನು 82,000 ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News