ಹೊಸದಿಲ್ಲಿ, ಸಮೀಪದ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಗಂಭೀರ ಸ್ಥಿತಿಗೆ

Update: 2020-11-14 17:56 GMT

ಹೊಸದಿಲ್ಲಿ, ನ. 14: ಹಲವು ಪ್ರದೇಶಗಳಲ್ಲಿ ಜನರು ನಿಷೇಧ ಉಲ್ಲಂಘಿಸಿ ಪಟಾಕಿ ಸಿಡಿಸಿರುವುದರಿಂದ ಹಾಗೂ ನೆರೆಯ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯ ದಹನದ ಮಾಲಿನ್ಯದಿಂದ ದಿಲ್ಲಿಯ ವಾಯು ಗುಣಮಟ್ಟ ಶನಿವಾರ ಗಂಭೀರ ಸ್ಥಿತಿಗೆ ಇಳಿಕೆಯಾಗಿದೆ.

ನಗರದಲ್ಲಿ ಶನಿವಾರ ಒಟ್ಟು 414 ಎಕ್ಯುಐ (ವಾಯು ಗುಣಮಟ್ಟ ಸೂಚ್ಯಾಂಕ ) ದಾಖಲಾಗಿದೆ. ಇದು ಅತ್ಯಂತ ಗಂಭೀರ ವರ್ಗದಲ್ಲಿ ಬರುತ್ತದೆ. ಗುರುವಾರ 314 ಎಕ್ಯುಐ, ಶುಕ್ರವಾರ 339 ಎಕ್ಯುಐ ದಾಖಲಾಗಿದೆ. ಇದಕ್ಕೆ ಹೋಲಿಸಿದರೆ, ಕಳೆದ 24 ಗಂಟೆಗಳಲ್ಲಿ ದಾಖಲಾದ ಎಕ್ಯುಐ ಅತ್ಯಧಿಕವಾಗಿದೆ.

ನಗರದ ಪಿಎಂ 2.5 ಮಾಲಿನ್ಯಕ್ಕೆ ಬೆಳೆ ತ್ಯಾಜ್ಯ ದಹನ ಶೇ. 32 ಕಾರಣವಾಗಿದೆ. ಮಾಲಿನ್ಯದ ಈ ಸಣ್ಣ ಕಣಗಳು ಶ್ವಾಸಕೋಶ ಪ್ರವೇಶಿಸಿ ಕ್ಯಾನ್ಸರ್ ಹಾಗೂ ಹೃದ್ರೋಗ ಸಮಸ್ಯೆಯಂತಹ  ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಹೆಚ್ಚುವರಿ ಮಾಲಿನ್ಯ ಹೊರಸೂಸುವಿಕೆಯ ಸಣ್ಣ ಮಟ್ಟದ ಏರಿಕೆ ಕೂಡ ರವಿವಾರ ಹಾಗೂ ಸೋಮವಾರ ವಾಯು ಗುಣಮಟ್ಟದಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಗಲಿದೆ ಎಂದು ಭೂ ವಿಜ್ಞಾನ ಸಚಿವಾಲಯದ ವಾಯು ಗುಣಮಟ್ಟ ಪರಿವೀಕ್ಷಿಸುವ ಎಸ್‌ಎಎಫ್‌ಎಆರ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News